Advertisement

ಸಾಕಾರಗೊಂಡ ಸರ್ದಾರ್‌ ಪಟೇಲ್‌ ಕನಸು

11:52 PM Aug 05, 2019 | Team Udayavani |

ಭಾರತದ ಉಕ್ಕಿನ ಮನುಷ್ಯ ಎಂಬ ಖ್ಯಾತಿ ಹೊಂದಿದ್ದ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌, ಸ್ವಾತಂತ್ರ್ಯನಂತರ ಇಡೀ ದೇಶವನ್ನು ಒಗ್ಗೂಡಿಸಲು ಬಲವಾಗಿ ಶ್ರಮಿಸಿದ್ದರು. ಭಾರತದ ಬಹುತೇಕ ರಾಜ್ಯಗಳು ಹೆಚ್ಚು ಶ್ರಮವಿಲ್ಲದೇ, ಭಾರತ ಸರಕಾರವನ್ನು ಒಪ್ಪಿಕೊಂಡವು. ಸವಾಲಾಗಿದ್ದು ಹೈದರಾಬಾದ್‌, ಜುನಾಗಢ ಮತ್ತು ಜಮ್ಮು-ಕಾಶ್ಮೀರ ಮಾತ್ರ.

Advertisement

ಈ ಪೈಕಿ ಮೊದಲೆರಡು ಸ್ಥಳಗಳಲ್ಲಿ ಮುಸ್ಲಿಂ ರಾಜ, ಹಿಂದು ಪ್ರಜೆಗಳು ಇದ್ದರು. ಸೇನಾ ಕಾರ್ಯಾ ಚರಣೆ ಮೂಲಕ ಇವೆರಡನ್ನು ಪಟೇಲ್‌ ವಶಪಡಿಸಿಕೊಂಡರು. ಆದರೆ ಹಿಂದು ರಾಜ, ಮುಸ್ಲಿಂ ಪ್ರಜೆಗಳು ಇದ್ದ ಜಮ್ಮು ಕಾಶ್ಮೀರವನ್ನು ವಶಪಡಿಸಿಕೊಳ್ಳು ವುದು ದೊಡ್ಡ ಸಾಹಸವಾಗಿತ್ತು. ಆ ಹಂತದಲ್ಲಿ ಹಲವಾರು ಸುತ್ತಿನ ಮಾತುಕಥೆ ನಂತರ, ಮಹಾರಾಜ ಹರಿಸಿಂಗ್‌ ಭಾರತಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದರು.ನೆಹರೂ ಮತ್ತು ಶೇಖ್‌ ಅಬ್ದುಲ್ಲಾ ನಡುವೆ ಒಪ್ಪಂದದ ಪ್ರಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಯಿತು. ಇಲ್ಲಿಯವರೆಗೆ ಭೌಗೋಳಿಕವಾಗಿ ಭಾರತದಲ್ಲಿದ್ದರೂ, ಭಾವನಾತ್ಮಕವಾಗಿ ಕಾಶ್ಮೀರ ಪ್ರತ್ಯೇಕತೆ ಹೊಂದಿತ್ತು.

ಇದೀಗ 370ನೇ ವಿಧಿ ರದ್ದಾಗಿದ್ದರಿಂದ ಆ ರಾಜ್ಯಕ್ಕೂ ಭಾರತದ ಇತರೆಡೆ ಅನ್ವಯವಾಗುವ ಕಾನೂನುಗಳೆಲ್ಲ ಅನ್ವಯವಾಗುತ್ತವೆ. ಇಲ್ಲಿಗೆ ಜಮ್ಮುಕಾಶ್ಮೀರವನ್ನು ಪೂರ್ಣವಾಗಿ ಭಾರತದ ಗಣತಂತ್ರದೊಳಗೆ ವಿಲೀನ ಮಾಡುವ ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ಕನಸು ನಿಜಕ್ಕೂ ನನಸಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next