Advertisement

ಕಾರ್ತಿ ಸಿನಿ ಕೆರಿಯರ್‌ನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ʼಸರ್ದಾರ್‌ -2ʼ

05:08 PM May 25, 2024 | |

ಚೆನ್ನೈ: 2022 ರಲ್ಲಿ ತೆರಕಂಡಿದ್ದ ಕಾರ್ತಿ ಅಭಿನಯದ ʼಸರ್ದಾರ್‌ʼ ಕಾಲಿವುಡ್‌ ನಲ್ಲಿ ಪೈಸಾ ವಸೂಲ್‌ ಮಾಡಿ ಕಮಾಲ್‌ ಮಾಡಿತ್ತು. ಈ ಸಿನಿಮಾದ ಸೀಕ್ವೆಲ್‌ ಅನೌನ್ಸ್‌ ಆದ ಬಳಿಕ ಫ್ಯಾನ್ಸ್‌ ಚಿತ್ರದ ಅಪ್ಡೇಟ್‌ ಗಾಗಿ ಕಾಯುತ್ತಿದ್ದಾರೆ.

Advertisement

ಥ್ರಿಲ್ಲರ್‌ ʼಸರ್ದಾರ್‌ʼ ನಲ್ಲಿ ಕಾರ್ತಿ ಮಾಸ್‌ ಲುಕ್‌ ನಲ್ಲಿ ಮಿಂಚಿದ್ದರು. ನಿರ್ದೇಶಕ ಪಿಎಸ್ ಮಿತ್ರನ್ ಮೊದಲ ಬಾರಿ ಕಾರ್ತಿ ಜೊತೆ ಕೈಜೋಡಿಸಿದ್ದರು. ಅಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಂದಿದ್ದ ʼಸರ್ದಾರ್‌ʼ ಬಾಕ್ಸ್‌ ಆಫೀಸ್‌ ನಲ್ಲಿ ಉತ್ತಮ ಗಳಿಕೆ ಕಂಡಿತ್ತು.

ʼಸರ್ದಾರ್‌ -2ʼ ಸಿನಿಮಾದ ಸ್ಕ್ರಿಪ್ಟ್‌ ಹಾಗೂ ಕಥೆ ಎಲ್ಲಾ ತಯಾರಾಗಿ ಸೆಟ್ಟೇರಲು ಕಾಯುತ್ತಿದೆ. ಇದೀಗ ಸಿನಿಮಾದ ಕುರಿತಾದ ಲೇಟೆಸ್ಟ್‌ ಅಪ್ಡೇಟ್‌ ನ್ನು ʼಪಿಂಕ್‌ ವಿಲ್ಲಾʼ ರಿವೀಲ್‌ ಮಾಡಿದೆ.

“ಇದೇ ವರ್ಷದ ಜುಲೈ ತಿಂಗಳಿನಲ್ಲಿ ʼಸರ್ದಾರ್‌ -2ʼ ಸೆಟ್ಟೇರಲಿದೆ. ಶೇ. 40 ಭಾಗವನ್ನು ವಿದೇಶದಲ್ಲಿ ಶೂಟ್‌ ಮಾಡಲಾಗುತ್ತದೆ. ಅಜರ್‌ಬೈಜಾನ್ ಮತ್ತು ಕಝಾಕಿಸ್ತಾನ್‌ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಉದ್ದೇಶಿಸಿದೆ. ತಂಡವು ಈಗಾಗಲೇ ಕೆಲವು ಸ್ಟಾಕ್ ಫೂಟೇಜ್‌ಗಳನ್ನು ಚಿತ್ರೀಕರಿಸಿದೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

“ಈ ಚಿತ್ರವು ಕಾರ್ತಿ ಅವರ ವೃತ್ತಿಜೀವನದ ಅತ್ಯಂತ ದುಬಾರಿ ಚಿತ್ರವಾಗಲಿದೆ ಮತ್ತು ಸೀಕ್ವೆಲ್‌ ಮೊದಲ ಭಾಗಕ್ಕಿಂತ ದೊಡ್ಡದು ಮತ್ತು ಹೆಚ್ಚಿನ ಸಾಹಸ ದೃಶ್ಯಗಳನ್ನು ಹೊಂದಿರಲಿದೆ. ವಿದೇಶದ ಹೊರತಾಗಿ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ತಯಾರಕರು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ 3 ದೊಡ್ಡ ಸೆಟ್‌ಗಳನ್ನು ಹಾಕಲಿದ್ದಾರೆ. ʼಸರ್ದಾರ್ 2ʼ ವಿನ ಸಾಹಸ ದೃಶ್ಯಗಳನ್ನು ಭಾರತದಲ್ಲಿ ಮತ್ತು ಅಂತರಾಷ್ಟ್ರೀಯ ಸ್ಥಳಗಳಲ್ಲಿ ಚಿತ್ರೀಕರಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.

Advertisement

ಹಿಂದಿ ಮಾರುಕಟ್ಟೆಗಳಲ್ಲಿ ಕಾರ್ತಿ ಅವರ ʼಸರ್ದಾರ್‌ -2ʼ ಸದ್ದು ಮಾಡಲು ಚಿತ್ರತಂಡ ಯೋಜನೆಯನ್ನು ಹಾಕಿಕೊಂಡಿದೆ. ಇದಕ್ಕಾಗಿ ಬಿಟೌನ್‌ ಕಲಾವಿದರು ಸಿನಿಮಾದಲ್ಲಿ ನಟಿಸಲು ಮಾತುಕತೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ʼಸರ್ದಾರ್ 2ʼ ಚಿತ್ರದ ಸಂಗೀತವನ್ನು ಯುವನ್ ಶಂಕರ್ ಸಂಯೋಜಿಸಲಿದ್ದಾರೆ ಮತ್ತು ಕೆಲವು ಅತ್ಯುತ್ತಮ ತಂತ್ರಜ್ಞರು ಚಿತ್ರತಂಡದಲ್ಲಿ ಇರಲಿದ್ದಾರೆ. 2025 ರಲ್ಲಿ ಸಿನಿಮಾ ತೆರೆಗೆ ಬರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next