Advertisement

Tripura: ಸರಸ್ವತಿ ಮಾತೆ ವಿವಸ್ತ್ರ ಮೂರ್ತಿ, ಪ್ರತಿಭಟನೆ

12:55 AM Feb 16, 2024 | Team Udayavani |

ಅಗರ್ತಲಾ: ತ್ರಿಪುರಾದ ಲಿಚುಬಗಾನ್‌ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನ ವಿದ್ಯಾರ್ಥಿಗಳು ಕೆತ್ತಿದ್ದು ಎನ್ನಲಾದ ಸರಸ್ವತಿ ದೇವಿಯ ವಿವಸ್ತ್ರ ಮೂರ್ತಿಯ ವಿಡಿಯೋ ವೈರಲ್‌ ಆಗಿದ್ದು, ಆರ್‌ಎಸ್‌ಎಸ್‌ ಮತ್ತು ಬಜರಂಗದಳ ಕಾರ್ಯಕರ್ತರು ಕಾಲೇಜಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.

Advertisement

ಬಸಂತ್‌ ಪಂಚ ಮಿಯ ದಿನವಾದ ಬುಧವಾರ ಕಾಲೇಜಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಉದ್ದೇಶಪೂರ್ವಕ­ವಾ­ಗಿಯೇ ಸರಸ್ವತಿ ಮಾತೆಯ ಪ್ರತಿಮೆಯನ್ನು ಕೆಟ್ಟ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪೂಜೆಗೆ ಅಡ್ಡಿಪಡಿಸಿ, ಮೂರ್ತಿಗೆ ಸೀರೆ ತೊಡಿಸುವಂತೆ ಆಗ್ರಹಿಸಿ, ಕೊನೆಗೆ ತಾವೇ ಒಂದು ಒಂದು ಸೀರೆಯನ್ನು ಉಡಿಸಿದರು. ಪರಿಸ್ಥಿತಿ ಬಿಗಡಾ­ಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾ­ಗಮಿಸಿದರು. ಹಿಂದೂ ದೇವಾ­ಲ­ಯ­ಗಳಲ್ಲಿನ ವಾಸ್ತುಶಿಲ್ಪ ಅಧ್ಯಯನ ನಿಟ್ಟಿನಲ್ಲಿ ಮೂರ್ತಿಯನ್ನು ಆ ರೀತಿಯಲ್ಲಿ ಕೆತ್ತಲಾಗಿತ್ತು. ಯಾರ ಭಾವನೆಯನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next