Advertisement

ಶರಣೇಗೌಡ ಬಯ್ಯಾಪುರ ಮೇಲ್ಮನೆಗೆ ಹೋಗಲು ಅರ್ಹರಲ್ಲ: ಶಿವನಗೌಡ ನಾಯಕ

03:49 PM Dec 04, 2021 | Team Udayavani |

ಗಂಗಾವತಿ:ವಿಧಾನ ಪರಿಷತ್ತು ಬುದ್ಧಿವಂತರು ಮತ್ತು ವಿದ್ವಾಂಸರು ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವವರ ಜಾಗವಾಗಿದ್ದು, ರಾಯಚೂರು, ಕೊಪ್ಪಳ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶರಣೇಗೌಡ ಬಯ್ಯಾಪುರ ಮೇಲ್ಮನೆಗೆ ಹೋಗಲು ಅನರ್ಹರಾಗಿದ್ದಾರೆ ಎಂದು ಕೆಆರ್ ಡಿಸಿಎಲ್ ಅಧ್ಯಕ್ಷ ಹಾಗೂ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಹೇಳಿದರು.

Advertisement

ಅವರು ಗಂಗಾವತಿಯ ಅಮರಜ್ಯೋತಿ ಕಲ್ಯಾಣಮಂಟಪದಲ್ಲಿ ವಿಧಾನಪರಿಷತ್ ಚುನಾವಣೆಯ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಶ್ವವೇ ಮೆಚ್ಚುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ ಮನರಂಜನೆ ತೆಗೆದುಕೊಂಡಿದ್ದು ಸರಿಯಲ್ಲ ಎಂದರು.

ರಾಯಚೂರು ಕೊಪ್ಪಳ ಅವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯಾಗಬೇಕು. ಗ್ರಾಮ ಪಂಚಾಯಿತಿ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿಗಳು ಹೆಚ್ಚಿನ ಅಭಿವೃದ್ಧಿ ಕಾಣುವಂತಾಗಲು ಸರಕಾರದ ಮಧ್ಯೆ ವಿಧಾನ ಪರಿಷತ್ ಸದಸ್ಯರು ಕೆಲಸ ಮಾಡಬೇಕಾಗಿದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಅತ್ಯುತ್ತಮವಾದ ಅಭ್ಯರ್ಥಿಯಾಗಿದ್ದು ಬಿಎಸ್ಸಿ ಪದವಿಧರರಾಗಿದ್ದಾರೆ. ಬಿಜೆಪಿ ಸರ್ಕಾರ ಇರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನವನ್ನು ತರಲು ಅನುಕೂಲವಾಗುತ್ತದೆ. ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ವಿಶೇಷವಾಗಿ ನೂರು ಮನೆಗಳನ್ನು ವಸತಿ ಸಚಿವರಿಂದ ಮಂಜೂರು ಮಾಡಿಸಲಾಗುತ್ತದೆ ಆದ್ದರಿಂದ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಪಟ್ಟಣ ಪಂಚಾಯತ್ ಸದಸ್ಯರು ತಪ್ಪದೆ  ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ  ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಮನವಿ ಮಾಡಿದರು.

ಪ್ರಚಾರ ಸಭೆಯಲ್ಲಿ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸುಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಹಿರಿಯ ಮುಖಂಡರಾದ ಮಾಜಿ ಶಾಸಕ ಜಿ ವೀರಪ್ಪ, ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಎಚ್ ಗಿರೇಗೌಡ, ಚಂದ್ರಶೇಖರ ಹಲಗೇರಿ, ದುರ್ಗಪ್ಪ ಆಗೋಲಿ, ಕಾಶಿನಾಥ ಚಿತ್ರಗಾರ, ಮಳಗಿ ಚನ್ನಪ್ಪ, ಶ್ರೀನಿವಾಸ್ ದೂಳ್ ಚನ್ನವೀರನಗೌಡ ಕೋರಿ ಮಲ್ಲೇಶಪ್ಪ ನಾಯಕ್ ಸೇರಿ ಬಿಜೆಪಿಯ ಅನೇಕ ಮುಖಂಡರಿದ್ದರು.

Advertisement

ಇದೇ ಸಂದರ್ಭದಲ್ಲಿ ಸಾಣಾಪುರ, ಹಾಸಗಲ್, ಹಿಂದಿರುಗಿ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಿಜೆಪಿ ಪಕ್ಷವನ್ನು ಸೇರಿದರು.

Advertisement

Udayavani is now on Telegram. Click here to join our channel and stay updated with the latest news.

Next