ಕಲಬುರಗಿ: 18ನೇ ಶತಮಾನದ ಸಂತ ಹಾಗೂ ಸಾಮಾಜಿಕ ಸುಧಾರಕ ಶ್ರೀ ಶರಣಬಸವೇಶ್ವರರ ಜೀವನ, ಅವ ರ ಕುರಿತು “ಶ್ರೀ ಶರಣಬಸವ ಮಹಾದಾಸೋಹ ದರ್ಶನಂ’ ಮಹಾಕಾವ್ಯ ಎನ್ನುವ ಮಹತ್ವಾಕಾಂಕ್ಷೆವುಳ್ಳ ಗ್ರಂಥಯೊಂದನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಂಧ ಪ್ರಾಧ್ಯಾಪಕ ಶಿವರಾಜ ಶಾಸ್ತ್ರೀ ಹೇರೂರ ಹೊರತಂದಿದ್ದಾರೆ.
ಶರಣಬಸವೇಶ್ವರ ಕಲಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೊಫೆಸರ್ ಶಿವರಾಜ ಶಾಸ್ತ್ರೀ ಹೇರೂರ ಅವರು ಶರಣಬಸವೇಶ್ವರರ ಜೀವನ ಮತ್ತು ಅವ ಧಿ ಬಗ್ಗೆ ಕಾವ್ಯ ಸ್ವರೂಪದಲ್ಲಿ ಕೇವಲ ಮೂರು ತಿಂಗಳುಗಳಲ್ಲಿ ಈ ಗ್ರಂಥ ಬರೆದಿದ್ದಾರೆ. ಪ್ರೊಫೆಸರ್ ಹೇರೂರ ಇದೇ ಮೊದಲ ಬಾರಿಗೆ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ ಜೀವನ ಮತ್ತು ಅವ ಧಿ ಬಗ್ಗೆ ಸಂಪೂರ್ಣ ಸಾರವನ್ನು ಒಳಗೊಂಡ ಗ್ರಂಥ ರಚಿಸಿದ್ದಾರೆ. ಕೆ.ವಿ. ಪುಟ್ಟಪ್ಪ (ಕುವೆಂಪು) ಅವರ “ಮಹಾಕಾವ್ಯ’ದ ನಂತರ ಹೊರಬಂದ ಮಹಾಕಾವ್ಯ ಇದಾಗಿದೆ.
ಪ್ರೊ| ಹೇರೂರ ಕುವೆಂಪು ನಂತರ ಮಹಾಕಾವ್ಯ ಬರೆದ ಏಕೈಕ ಲೇಖಕರಾಗಿದ್ದಾರೆ. 444 ಪುಟಗಳ ಮಹಾಕಾವ್ಯವು 1564 ಸಾಲಿನ ಚರಣಗಳನ್ನು ಹೊಂದಿದೆ. 18ನೇ ಶತಮಾನದ ಭೀಕರ ಬರಗಾಲವೊಂದರಲ್ಲಿ ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತನ್ನ ಸೇವೆಯೊಂದಿಗೆ ರಕ್ಷಕನಾಗಿ ಹೊರಹೊಮ್ಮಿದ ಮಹಾನ್ ಸಂತರ ಜೀವನವನ್ನು ಈ ಕೃತಿ ತಿಳಿಸುತ್ತದೆ. ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿ ಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರ “ಶರಣಬಸವೇಶ್ವರ ಪುರಾಣ-ಒಂದು ಅಧ್ಯಯನ’ ಎನ್ನುವ ವಿಷಯ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮುಗಿಸಿದ ಪ್ರೊಫೆಸರ್ ಹೇರೂರ, ಶರಣಬಸವೇಶ್ವರರ ಜೀವನ ಮತ್ತು ಅವಧಿ ಬಗ್ಗೆ ಸಮಗ್ರ ಪುಸ್ತಕ ಬರೆಯಬೇಕೆಂದು ಬಯಸಿದ್ದೇವು ಎಂದು ತಿಳಿಸಿದ್ದಾರೆ. ಈ ಗ್ರಂಥ ಸತ್ಯಾಸತ್ಯತೆ ಮತ್ತು ಭಾಷೆ ಶ್ರೀಮಂತಿಕೆಯಿಂದ ಸಾಹಿತ್ಯ ವಲಯಗಳಲ್ಲಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದೆ.
ಪುಸ್ತಕದ ಮತ್ತೂಂದು ವೈಶಿಷ್ಟ ವೆಂದರೆ ಪ್ರೊಫೆಸರ್ ಹೇರೂರ ಪುಸ್ತಕವನ್ನು ಬ್ರೆçಲ್ ಲಿಪಿ ರೂಪದಲ್ಲಿಯೂ ಹೊರತಂದಿದ್ದಾರೆ. ಈ ಪುಸ್ತಕವನ್ನು ಶರಣಬಸವ ವಿವಿ ವತಿಯಿಂದ ಪ್ರಕಟಿಸಲಾಗಿದೆ. ಈ ಗ್ರಂಥದಲ್ಲಿ ಶರಣಬಸವೇಶ್ವರರು ಜನ್ಮತಾಳಿದ ಕುರಿತು ಮಾಹಿತಿ ನೀಡಲಾಗಿದೆ.