Advertisement

ಸಂಜೆ 4:30 ಗಂಟೆಗೆ ಸರಾಫ‌ ಅಂಗಡಿ ವಹಿವಾಟೂ ಬಂದ್‌

11:15 AM Jul 10, 2020 | Suhan S |

ಹುಬ್ಬಳ್ಳಿ: ಅವಳಿನಗರದಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಸರಾಫ ಸಂಘದವರು ಅಂಗಡಿಗಳನ್ನು ಜು. 31ರ ವರೆಗೆ ಬೆಳಗ್ಗೆ 10ರಿಂದ ಸಂಜೆ 4:30 ಗಂಟೆ ವರೆಗೆ ಮಾತ್ರ ತೆರೆಯಲು ನಿರ್ಧರಿಸಿದ್ದಾರೆ.

Advertisement

ಜೊತೆಗೆ ಕರ್ಫ್ಯೂವನ್ನು ರಾತ್ರಿ 8 ಗಂಟೆ ಬದಲು ಸಂಜೆ 5 ಗಂಟೆಯಿಂದಲೇ ಜಾರಿಗೊಳಿಸಿ ಕೋವಿಡ್ 19 ಹರಡುವಿಕೆ ತಡೆಗಟ್ಟಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಸರಾಫ ಸಂಘದ ಪದಾಧಿಕಾರಿಗಳು, ಸದಸ್ಯರು ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸರಕಾರದ ನಿರ್ದೇಶನಗಳನ್ನು ಪಾಲಿಸುವುದು ಬಹಳ ಅವಶ್ಯ. ಆ ನಿಟ್ಟಿನಲ್ಲಿ ತಮ್ಮ ವಹಿವಾಟುಗಳನ್ನು ಸಂಜೆಯೊಳಗೆ ಪೂರ್ಣಗೊಳಿಸಲು ನಿರ್ಧರಿಸಿದ್ದು, ಗುರುವಾರದಿಂದಲೇ ಅದನ್ನು ಜಾರಿಗೊಳಿಸಿದ್ದಾರೆ. ಸಭೆಯಲ್ಲಿ ಸಂಘದ ಅಧ್ಯಕ್ಷ ಪರಶುರಾಮ ಚಿಲ್ಲಾಳ, ಕಾರ್ಯದರ್ಶಿ ವಿಠuಲ ಪೂಜಾರಿ, ಗೋವಿಂದ ನಿರಂಜನ, ಶ್ರೀಕಾಂತ ಕರಿ, ಬಾಬು ಅಣವೇಕರ, ವೀರಣ್ಣಾ ಹೂಲಿ, ಶಿವಾನಂದ ಜೋಗಿನ, ನವರತ್ನರಾಜ ಸಂಘವಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next