Advertisement
ರಾಜ್ಯಸಭೆಯಲ್ಲಿ ವಿಧೇಯಕ ಮೇಲಿನ ಚರ್ಚೆಗೆ ಉತ್ತರ ವಾಗಿ ಮಾತನಾಡಿದ ವಿತ್ತ ಖಾತೆ ಸಹಾಯಕ ಸಚಿವ ಅನುರಾಗ್ ಸಿಂಗ್ ಠಾಕೂರ್, ಸದಸ್ಯರೆಲ್ಲರೂ ವಿಧೇಯಕಕ್ಕೆ ಬೆಂಬಲ ನೀಡಿ ‘ಆಶೀರ್ವದಿಸಬೇಕು’ ಎಂದು ಮನವಿ ಮಾಡಿದ್ದರು.
Related Articles
Advertisement
293 ಅಣೆಕಟ್ಟುಗಳಿಗೆ ಸೆಂಚುರಿ: ದೇಶದಲ್ಲಿರುವ ಸರಿ ಸುಮಾರು 293 ಅಣೆಕಟ್ಟುಗಳು 100 ವರ್ಷಕ್ಕಿಂತ ಹಳೆಯವು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಅಣೆಕಟ್ಟು ಸುರಕ್ಷತಾ ವಿಧೇಯಕ ಮಂಡಿಸಿ ಅವರು ಮಾತನಾಡಿದರು. ವಿಧೇಯಕದಲ್ಲಿ ಪ್ರಸ್ತಾಪ ಮಾಡಿದಂತೆ ರಾಷ್ಟ್ರೀಯ ಅಣೆಕಟ್ಟು ಸುರಕ್ಷಾ ಪ್ರಾಧಿಕಾರ ರಚಿಸಿ ಅವುಗಳ ರಕ್ಷಣೆ, ನಿರ್ವಹಣೆ ಮಾಡಲಾಗುತ್ತದೆ. ಜತೆಗೆ ರಾಜ್ಯಗಳ ನಡುವಿನ ಬಿಕ್ಕಟ್ಟು ಪರಿಹಾರದ ಹೊಣೆಯೂ ಅದಕ್ಕೆ ಸಿಗಲಿದೆ.
ಕ್ಷಮೆ ಕೇಳಿದ ಅಜಂ ಖಾನ್
ಬಿಜೆಪಿ ಸಂಸದೆ, ಡೆಪ್ಯುಟಿ ಸ್ಪೀಕರ್ ರಮಾ ದೇವಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ಸೋಮವಾರ ಲೋಕಸಭೆ ಕಲಾಪ ಶುರುವಾಗುತ್ತಲೇ, ಸ್ಪೀಕರ್ ಓಂ ಬಿರ್ಲಾ ಅವರು ಖಾನ್‌ಗೆ ಕ್ಷಮೆ ಕೋರುವಂತೆ ಸೂಚಿಸಿದರು. ಈ ವೇಳೆ ಖಾನ್, ‘ಒಂಬತ್ತು ಬಾರಿ ಶಾಸಕ, ನಾಲ್ಕು ಬಾರಿ ಸಚಿವ, ಒಂದು ಬಾರಿ ರಾಜ್ಯಸಭೆ ಸದಸ್ಯನಾಗಿದ್ದ ತಮಗೆ ಸಂಸದೀಯ ನಡಾವಳಿ ಗೊತ್ತಿದೆ. ಇದರ ಹೊರತಾಗಿಯೂ ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆ ಕೋರುತ್ತೇನೆ’ ಎಂದರು. ಖಾನ್ ಹೇಳಿಕೆಯ ಕೆಲವು ಶಬ್ದಗಳು ಕೇಳದೇ ಇದ್ದುದರಿಂದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕ್ಷಮೆ ಕೇಳುವ ವಾಕ್ಯಗಳನ್ನು ಮತ್ತೂಮ್ಮೆ ಪುನರಾವರ್ತಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಸದನದಲ್ಲಿ 2 ಬಾರಿ ಸ್ಪೀಕರ್ ಆ ಮಾತುಗಳನ್ನು ಪುನರಾವರ್ತಿಸುವಂತೆ ಹೇಳಿದರು.
ಕಣ್ಣೀರು ಹಾಕಿದ ನಾಯ್ಡು
ಕೇಂದ್ರದ ಮಾಜಿ ಸಚಿವ ಎಸ್.ಜೈಪಾಲ್ ರೆಡ್ಡಿ ಅವರಿಗೆ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಕಣ್ಣೀರು ಹಾಕಿದ ಘಟನೆ ನಡೆದಿದೆ. 1990ರ ಏಪ್ರಿಲ್ನಿಂದ 1996ರ ಏಪ್ರಿಲ್ ಮತ್ತು 1997ರ ಸೆಪ್ಟೆಂಬರ್‌ನಿಂದ 1998ರ ಮಾರ್ಚ್ ನಲ್ಲಿ ರೆಡ್ಡಿ ಅವರು ಅವಿಭಜಿತ ಆಂಧ್ರಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ರೆಡ್ಡಿ ನಿಧನರಾಗಿರುವ ಬಗ್ಗೆ ಸಂತಾಪ ಸೂಚಕ ನಿರ್ಣಯ ಓದುತ್ತಿರುವಾಗಲೇ, ಸಭಾಪತಿ ವೆಂಕಯ್ಯ ನಾಯ್ಡುಗೆ ದುಃಖ ಉಕ್ಕಿ ಬಂತು. ‘ಎಸ್.ಜೈಪಾಲ್ ರೆಡ್ಡಿ ನಿಧನದಿಂದ ದೇಶ ಅಪ್ರತಿಮ ಸಂಸದೀಯಪಟುವನ್ನು ಕಳೆದುಕೊಂಡಿದೆ. ಅವರು ಉತ್ತಮ ವಾಗ್ಮಿ ಮತ್ತು ಆಡಳಿತಗಾರ’ ಎಂದು ಕೊಂಡಾಡಿದರು.