ಮೈಸೂರು: ನಾನು ಆಂಧ್ರದ ಒಬ್ಬ ಐಎಎಸ್ ಅಧಿಕಾರಿ ವಿರುದ್ಧ ಮಾತನಾಡಬಾರದೆಂದು ತೀರ್ಮಾನ ಮಾಡಿದ್ದೆ. ಆರ್.ನಗರ ಶಾಸಕರು ಮೈಸೂರಿನ ಕೋವಿಡ್ ಆಸ್ಪತ್ರೆಗಳ ಬಗ್ಗೆ ಏಕೆ ಮಾತನಾಡಬೇಕು ಎಂದಿದ್ದಾರೆ. ಇವರು ನಿಜವಾಗಿಯೂ ಐಎಎಸ್ ಮಾಡಿದ್ದಾರಾ..? ಎಂದು ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್ ಗುಡುಗಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾಡಿದರು. ನೀವು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆಗಿದ್ದೀರಿ. 7 ತಿಂಗಳ ಅವಧಿಯಲ್ಲಿ ಒಂದೇ ಒಂದು ಗುಂಟೆ ಒತ್ತುವರಿ ತೆರವು ಮಾಡಿದ್ದರೆ ತೋರಿಸಿ. ಈಗಲೂ ನೀವು ಐಎಎಸ್ ಅಧಿಕಾರಿಯೇ ಆಗಿದ್ದೀರಿ, ಕರ್ನಾಟಕದಲ್ಲೇ ಇದ್ದೀರಿ. ಸರ್ಕಾರಿ ಭೂಮಿ ಉಳಿಸಿದ್ದರೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಿ ಅಥವಾ ನೀವೇ ಸೃಷ್ಟಿ ಮಾಡಿಸಿಕೊಂಡಿರುವ ಫೇಸ್‌ಬುಕ್ ಅಕೌಂಟ್‌ನಲ್ಲಿ ದಾಖಲೆ ಬಹಿರಂಗಪಡಿಸಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ರಾಧಿಕಾ ಪಂಡಿತ್ ಭರವಸೆ
ನಾನು 10 ಆರೋಪಗಳನ್ನು ಸಾಕ್ಷಿ ಸಮೇತ ಮಾಡಿದ್ದೇನೆ. ಯಾವಾಗ ಆಂಧ್ರದ ಲಾಭಿ ಮಾಡಿ ಕರ್ನಾಟಕದ ಅಧಿಕಾರಿ(ಬಿ.ಶರತ್) ಎತ್ತಂಗಡಿ ಮಾಡಿದ್ದೀರೋ ಅಂದಿನ ದಿನದಿಂದಲೂ ನಿಮ್ಮ ವಿರುದ್ಧ ಆರೋಪ ಮಾಡುತ್ತ ಬಂದಿದ್ದೇನೆ. ಅಂದಿನಿಂದಲೇ ನೀವು ಸರ್ಕಾರಿ ಭೂಮಿ ಉಳಿಸುವ ಪ್ರಯತ್ನ ಮಾಡಬಹುದಿತ್ತು ಅಲ್ವಾ? ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಇವರಿಗೆ ಸ್ವಿಮ್ಮಿಂಗ್ ಮಾಡೊಕೆ ಕುಡಿಯೋ ನೀರು ಬೇಕು. ಇವರಿಗಿಂತ ಮುಂಚೆ ಇದ್ದ ಜಿಲ್ಲಾಧಿಕಾರಿಗಳ ಮನೆಯ ಕೆಇಬಿ ಬಿಲ್ ನೋಡಿ. ಕೇವಲ 4 ಅಥವಾ 5 ಸಾವಿರ ಕರೆಂಟ್ ಬಿಲ್ ಬಂದಿದೆ. ರೋಹಿಣಿ ಸಿಂಧೂರಿ ಉಪಯೋಗಿಸಿರುವ ಕೆಇಬಿ ಬಿಲ್ ನೋಡಿ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ. ಒಂದೊಂದು ತಿಂಗಳಲ್ಲಿ 50ಸಾವಿರ ಕರೆಂಟ್ ಬಿಲ್ ಬಂದಿದೆ. ಯಾವ ಮಂತ್ರಿ ಮನೆಯಲ್ಲೂ ಇಷ್ಟು ದೊಡ್ಡ ಮೊತ್ತದ ಕರೆಂಟ್ ಬಿಲ್ ಬಂದಿಲ್ಲ. ಒಬ್ಬ ಸೆಕೆಂಡ್ ಕ್ಲಾಸ್ ಅಧಿಕಾರಿ ವೇತನ ನಿಮ್ಮ ಕರೆಂಟ್ ಬಿಲ್ ಗೆ ಸಮ. ಇಂತವರಿಂದ ಕರ್ನಾಟಕ ಉಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಂಗಾರು ಅಬ್ಬರ…ಮುಂಬಯಿಯಲ್ಲಿ ಧಾರಾಕಾರ ಮಳೆ; ಟ್ರಾಫಿಕ್ ಜಾಮ್, ರೈಲು ಸಂಚಾರ ವ್ಯತ್ಯಯ
ನಮ್ಮ ರಾಜ್ಯದ ದೇವಾಲಯಗಳು ಕುಸಿದು ಬೀಳುತ್ತಿದ್ದರೂ 200 ಕೋಟಿ ರೂ.ಗಳನ್ನು ಆಂಧ್ರಕ್ಕೆ ನೀಡಿದ್ದರು. 4G ವಿನಾಯಿತಿ ಅಡಿಯಲ್ಲಿ ಹಣ ಬಿಡುಗಡೆಯಾಗಿದೆ. 16 ಲಕ್ಷ ಹಣ ಬಳಸಿ ಪಾರಂಪರಿಕ ಕಟ್ಟಡದ ನವೀಕರಣ ಮಾಡಿದ್ದಾರೆ. ಅದಾದ ನಂತರ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ ಎಂದು ಗುಡುಗಿದ್ದಾರೆ.