ಮುಂಬಯಿ: ಬಾಲಿವುಡ್ ನಟಿ ಸಾರಾ ಆಲಿಖಾನ್ ಕಳೆದ ಕೆಲ ದಿನಗಳಿಂದ ನೆಟ್ಟಿಗರ ಟ್ರೋಲ್ ಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ದೇವಸ್ಥಾನಗಳಿಗೆ ಭೇಟಿ ಕೊಟ್ಟ ವಿಚಾರ.
ʼಜರಾ ಹಟ್ ಕೆ, ಜರಾ ಬಚ್ ಕೆʼ(Zara Hat Ke, Zara Bach Ke) ಸಿನಿಮಾದಲ್ಲಿ ನಟಿ ಸಾರಾ ನಟಿಸಿದ್ದಾರೆ. ವಿಕ್ಕಿ ಕೌಶಲ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಂಡ ಸಾರಾ ಸದ್ಯ ಸಿನಿಮಾದ ಪ್ರಚಾರದ ಅಂಗವಾಗಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ನಟಿ ಸಾರಾ ಆಲಿಖಾನ್ ಮಹಾಕಾಲ್ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಕಾರಣಕ್ಕೆ ನಟಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: IPL Final: ಮೋಹಿತ್ ಜತೆ ಮಾತನಾಡಿದ್ದು ಹಾರ್ದಿಕ್ ಮಾಡಿದ ತಪ್ಪು: ಸೆಹವಾಗ್ ಕಿಡಿ
Related Articles
ಇದೀಗ ಈ ಬಗ್ಗೆ ಟ್ರೋಲ್ ಗಳಿಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. “ನಾನು ನನ್ನ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ನಾನು ಜನರಿಗಾಗಿ ಮಾಡುತ್ತೇನೆ. ನನ್ನ ಕೆಲಸ ನಿಮಗೆ ಇಷ್ಟವಾಗದಿದ್ದರೆ ನನಗೆ ಬೇಸರವಾಗುತ್ತದೆ. ಆದರೆ ನನ್ನ ವೈಯಕ್ತಿಕ ನಂಬಿಕೆಗಳು ನನ್ನದೇ ಆಗಿರುತ್ತವೆ. ನಾನು ಬಾಂಗ್ಲಾ ಸಾಹಿಬ್ ಅಥವಾ ಮಹಾಕಾಲ್‌ಗೆ ಹೋಗುವ ಅದೇ ಭಕ್ತಿಯಿಂದ ಅಜ್ಮೀರ್ ಷರೀಫ್‌ಗೆ ಹೋಗುತ್ತೇನೆ. ನಾನು ಭೇಟಿ ನೀಡುವುದನ್ನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಲಿ, ನನಗೆ ಯಾವುದೇ ತೊಂದರೆ ಇಲ್ಲ. ನೀವು ಸ್ಥಳದ ಶಕ್ತಿಯನ್ನು ಇಷ್ಟಪಡಬೇಕು. ನಾನು ಶಕ್ತಿಯನ್ನು ನಂಬುತ್ತೇನೆ.” ಎಂದು ನಟಿ ಹೇಳಿದ್ದಾರೆ.
ಸದ್ಯ ʼಜರಾ ಹಟ್ ಕೆ, ಜರಾ ಬಚ್ ಕೆʼ ಚಿತ್ರದಲ್ಲಿ ನಟಿಸಿದ್ದು, ಆ ಬಳಿಕ ʼಏ ವತನ್ ಮೇರೆ ವತನ್ʼ ಮತ್ತು ಅನುರಾಗ್ ಬಸು ಅವರ ʼಮೆಟ್ರೋ ಇನ್ ಡಿನೋʼ ಚಿತ್ರಗಳಲ್ಲಿ ನಟಿಸಲಿದ್ದಾರೆ.