Advertisement

ಸಾರಾ ಅವರನ್ನು ಅವಗಣಿಸಿದ ಸರಕಾರ, ಜಿಲ್ಲಾಡಳಿತ: ಖಂಡನೆ

10:27 PM Jan 12, 2023 | Team Udayavani |

ಮಂಗಳೂರು: ಖ್ಯಾತ ಬರಹಗಾರ್ತಿ ಸಾರಾ ಅಬೂಬಕ್ಕರ್‌ ಅವರು ನಿಧನ ಹೊಂದಿದ ಸಂದರ್ಭ ಸರಿಯಾದ ಗೌರವ ಸಲ್ಲಿಸದೆ ರಾಜ್ಯ ಸರಕಾರ ಹಾಗೂ ದ.ಕ. ಜಿಲ್ಲಾಡಳಿತ ಅವಗಣಿಸಿರುವುದು ಖೇದಕರ ಹಾಗೂ ಸರಕಾರದ ಈ ನಡೆ ಖಂಡನೀಯ ಎಂದು ಹಲವು ಮುಖಂಡರು ತಿಳಿಸಿದ್ದಾರೆ.

Advertisement

ಕರ್ನಾಟಕದ ಮುಸ್ಲಿಂ ಸಮುದಾಯ ಕನ್ನಡದಲ್ಲಿ ಸಾಹಿತ್ಯ ಕೃಷಿ ನಡೆಸುವುದೇ ಅಪರೂಪವಾಗಿದ್ದ ಕಾಲಘಟ್ಟದಲ್ಲಿ ಆ ಸಮುದಾಯದ ಹೆಣ್ಣು ಮಗಳು ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದದ್ದು, ಸಮಾಜದ ಕಂದಾಚಾರ, ತನ್ನದೇ ಸಮುದಾಯದ ಹೆಣ್ಣು ಮಕ್ಕಳ ಸಂಕಟಗಳನ್ನು ಕತೆಯಾಗಿಸಿದ್ದು ದೊಡ್ಡ ಸಾಧನೆ. ಅಂತಹ ಬರವಣಿಗೆಗಳ ಕಾರಣಕ್ಕೆ ಅವರು ಎದುರಿಸಿದ ದಾಳಿ, ದಬ್ಟಾಳಿಕೆಗಳೂ ಸಣ್ಣದಲ್ಲ. ಮಹಿಳಾಪರ ಹೋರಾಟಗಳಲ್ಲಿಯೂ ತೊಡಗಿಸಿಕೊಂಡ ಹೆಗ್ಗಳಿಕೆ ಸಾರಾ ಅವರದ್ದು. ಇಂತಹ ಬರಹಗಾರ್ತಿ, ಲೇಖಕಿ ಅಗಲಿದ ಸಂದರ್ಭ ಸಹಜವಾಗಿಯೇ ಅವರಿಗೆ ಸರಕಾರಿ ಗೌರವಗಳು ಸಲ್ಲಬೇಕಿತ್ತು ಎಂದು ಪ್ರಮುಖರಾದ ಬಿ.ಎಂ. ರೋಹಿಣಿ, ಪ್ರೊ| ನರೇಂದ್ರ ನಾಯಕ್‌, ಟಿ.ಆರ್‌.ಭಟ್‌, ಚಂದ್ರಕಲಾ ನಂದಾವರ, ಪ್ರೊ| ಚಂದ್ರ ಪೂಜಾರಿ, ಪ್ರೊ| ಪಟ್ಟಾಭಿರಾಮ ಸೋಮಯಾಜಿ, ಎಂ. ದೇವದಾಸ್‌, ಬಿ.ಎಂ. ಹನೀಫ್‌, ವಾಸುದೇವ ಉಚ್ಚಿಲ, ಡಾ| ಬಿ. ಶ್ರೀನಿವಾಸ ಕಕ್ಕಿಲ್ಲಾಯ, ಗುಲಾಬಿ ಬಿಳಿಮಲೆ, ಪ್ರೊ| ಕೆ. ರಾಜೇಂದ್ರ ಉಡುಪ, ಮೋಹನ್‌ ಪಿ.ವಿ., ಐ.ಕೆ. ಬೊಳುವಾರು, ಯಶವಂತ ಮರೋಳಿ, ಮುನೀರ್‌ ಕಾಟಿಪಳ್ಳ, ಡಾ| ಕೃಷ್ಣಪ್ಪ ಕೊಂಚಾಡಿ, ಶ್ರೀನಿವಾಸ ಕಾರ್ಕಳ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next