Advertisement

ಸಪ್ತಕ ಸಂಗೀತ ಸಂಭ್ರಮ

02:25 PM May 26, 2018 | |

ಬೆಂಗಳೂರಿನಲ್ಲಿ ಸಂಗೀತ ಅಂದ್ರೆ ಸಾಕು, ಸ್ವರಪ್ರಿಯರಿಗೆ ಒಮ್ಮೆಲೇ “ಸಪ್ತಕ’ ಸಂಸ್ಥೆಯ ಹೆಸರು ನೆನಪಿಗೆ ಬರುತ್ತದೆ. ದಶಕಗಳ ಹಿಂದೆ ಕಣ್ತೆರೆದ ಈ ಸಂಸ್ಥೆ, ಈಗ ಹತ್ತು ದಿನಕ್ಕೊಮ್ಮೆ ಸಂಗೀತ ಕಾರ್ಯಕ್ರಮ ಆಯೋಜಿಸುವಷ್ಟು, ತನ್ನ ಗರಿಮೆ ಹೆಚ್ಚಿಸಿಕೊಂಡಿದೆ. ಈಗ “ಸಪ್ತಕ’ಕಕ್ಕೆ 12ನೇ ವಾರ್ಷಿಕೋತ್ಸವದ ಖುಷಿ.

Advertisement

ಈ ಪ್ರಯುಕ್ತ ಅದು “ಸಂಗೀತ ಸಂಭ್ರಮ’ವನ್ನು ಹಮ್ಮಿಕೊಂಡಿದೆ. ದೇಶದ ಸುಪ್ರಸಿದ್ಧ ಸಂಗೀತಕಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 1994ರಲ್ಲಿ ವಿಶ್ವದ ಗೌರವಾನ್ವಿತ ಸಂಗೀತ ಪ್ರಶಸ್ತಿ ಗ್ರಾಮಿಗೆ ಪಾತ್ರವಾಗಿದ್ದ “ಎ ಮೀಟಿಂಗ್‌ ಬೈ ದ ರಿವರ್‌’ ಆಲ್ಬಂಅನ್ನು ರೂಪಿಸಿದ್ದವರು ವೀಣಾ ವಾದಕ ಪಂ. ವಿಶ್ವ ಮೋಹನ್‌ ಭಟ್‌.

ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ವಡೋದರದ ಹಿಮಾಂಶು ಮಹಾಂತ ಅವರು ತಬಲವನ್ನು ನುಡಿಸಲಿದ್ದಾರೆ. ಕೋಲ್ಕತ್ತಾದ ಓಂಕಾರ್‌ ದಾದರ್‌ಕರ್‌ ಗಾಯನ ನಡೆಸಿಕೊಡಲಿದ್ದಾರೆ. ಮುಂಬೈನ ಪಂ. ವಿಶ್ವನಾಥ ಶಿರೋಡ್‌ಕರ್‌ ತಬಲ, ಬೆಂಗಳೂರಿನ ಡಾ. ರವೀಂದ್ರ ಕಾಟೊಟಿ ಹಾರ್ಮೋನಿಯಂ ಸ್ವರಾಭಿಮಾನಿಗಳನ್ನು ರಂಜಿಸಲಿದೆ.

ಯಾವಾಗ?: ಮೇ 27, ಭಾನುವಾರ, ಸಂ.5.30
ಎಲ್ಲಿ?: ಚೌಡಯ್ಯ ಮೆಮೋರಿಯಲ್‌ ಹಾಲ್‌, ಮಲ್ಲೇಶ್ವರ
ಸಂಪರ್ಕ: 94480 67829, 70194 34992

Advertisement

Udayavani is now on Telegram. Click here to join our channel and stay updated with the latest news.