Advertisement

OTT: ಈ ದಿನ ಓಟಿಟಿಗೆ ಬರಲಿದೆ ರಕ್ಷಿತ್‌ ಶೆಟ್ಟಿಯ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ -ಬಿ?

01:22 PM Dec 19, 2023 | Team Udayavani |

ಬೆಂಗಳೂರು: ವರ್ಷಾಂತ್ಯಕ್ಕೆ ಸ್ಯಾಂಡಲ್‌ ವುಡ್‌ ಪ್ರಿಯರಿಗೆ ಓಟಿಟಿಯಲ್ಲಿ ಸಾಲು ಸಾಲಾಗಿ ಸಿನಿಮಾಗಳು ರಿಲೀಸ್‌ ಗೆ ಸಿದ್ದವಾಗಿದೆ. ಈಗಾಗಲೇ ಡಾಲಿ ಧನಂಜಯ ನಿರ್ಮಾಣದ “ಟಗರು ಪಲ್ಯ” ಸಿನಿಮಾ ಅಮೇಜಾನ್‌ ಪ್ರೈಮ್‌ ನಲ್ಲಿ ಸ್ಟ್ರೀಮ್‌ ಆಗಿದೆ.

Advertisement

ಇದೀಗ ಮತ್ತೆರೆಡು ಸಿನಿಮಾಗಳು ಓಟಿಟಿ ತೆರೆಗೆ ಸಿದ್ದವಾಗಿದೆ. ರಾಜ್‌ ಬಿ ಶೆಟ್ಟಿ ಅವರ ʼಟೋಬಿʼ ಈಗಾಗಲೇ ಓಟಿಟಿ ರಿಲೀಸ್ ಡೇಟ್‌ ನ್ನು ಅನೌನ್ಸ್‌ ಮಾಡಿದೆ. ಇದರೊಂದಿಗೆ ಅದೇ ದಿನ ಮತ್ತೊಂದು ಸಿನಿಮಾ ಕೂಡ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ ಎನ್ನಲಾಗುತ್ತಿದೆ.

ರಾಜ್‌ ಬಿ ಶೆಟ್ಟಿ ಅವರ ʼಟೋಬಿʼ ಸಿನಿಮಾ ಒಂದಷ್ಟು ಥಿಯೇಟರ್‌ ನಲ್ಲಿ ಸದ್ದು ಮಾಡಿತು. ಆದರೆ ಸಂಪೂರ್ಣವಾಗಿ ಗೆಲುವಲ್ಲಿ ಎಡವಿತು. ಆಗಸ್ಟ್‌ 25 ರಂದು ರಿಲೀಸ್‌ ಆದ ʼಟೋಬಿ” ಓಟಿಟಿ ರಿಲೀಸ್‌ ಸಿದ್ದವಾಗಿದೆ. ಇದೇ ಡಿ.22 ರಂದು ಸಿನಿಮಾ ಸೋನಿ ಲೈವ್‌ ನಲ್ಲಿ ಸ್ಟ್ರೀಮ್‌ ಆಗಲಿದೆ.

ಈ ವರ್ಷ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರಿಗೆ ಹಿಟ್‌ ತಂದುಕೊಟ್ಟ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ – ಎ,ಬಿ ಥಿಯೇಟರ್‌ ನಲ್ಲಿ ಜನ ಮೆಚ್ಚುಗೆ ಗಳಿಸಿದೆ. ಈಗಾಗಲೇ ಸೈಡ್‌ -1 ಓಟಿಟಿಯಲ್ಲಿ ಸ್ಟ್ರೀಮ್‌ ಆಗಿದೆ.

ಹೇಮಂತ್ ರಾವ್‌ ನಿರ್ದೇಶನದ  ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ -ಬಿ ನವೆಂಬರ್‌ 17 ರಂದು ಥಿಯೇಟರ್‌ ನಲ್ಲಿ ರಿಲೀಸ್‌ ಆಗಿತ್ತು. ಮೊದಲ ಭಾಗದಂತೆ ಎರಡನೇ ಭಾಗಕ್ಕೂ ಮೆಚ್ಚುಗೆ ಸಿಕ್ಕ ಬಳಿಕ ಇದೀಗ ಚಿತ್ರತಂಡ ಸಿನಿಮಾದ ಓಟಿಟಿ ರಿಲೀಸ್‌ ದತ್ತ ಗಮನ ಹರಿಸಿದೆ.

Advertisement

ಡಿಸೆಂಬರ್‌ 22 ರಂದು ಅಮೇಜಾನ್‌ ಪ್ರೈಮ್‌ ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಡಿ.22 ರಂದು ಸ್ಟ್ರೀಮ್‌ ಆದರೆ ಅದು ಮುಕ್ತವಾಗಿ ಎಲ್ಲಾ ಚಂದಾದರರಿಗೆ ಲಭ್ಯವಾಗುತ್ತದೋ ಅಥವಾ ರೆಂಟಲ್‌ ರೂಪದಲ್ಲಿ ಲಭ್ಯವಾಗುತ್ತದೋ ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next