“ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರ ನಟಿ ಶಾನ್ವಿ ಶ್ರೀವಾಸ್ತವ್, ಈಗ “ಕಸ್ತೂರಿ ಮಹಲ್’ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರದ ಹೆಸರನ್ನು “ಕಸ್ತೂರಿ ನಿವಾಸ’ದ ಬದಲು”ಕಸ್ತೂರಿ ಮಹಲ್’ ಅಂತ ಬದಲಾವಣೆ ಮಾಡಿಕೊಂಡಿದ್ದ ಚಿತ್ರತಂಡ, ಆ ನಂತರ ರಚಿತಾ ರಾಮ್ ಬದಲು ಶಾನ್ವಿ ಶ್ರೀವಾತ್ಸವ್ ಅವರನ್ನು ನಾಯಕಿಯನ್ನಾಗಿ ಮಾಡಿಕೊಂಡಿತ್ತು. ಈಗ “ಕಸ್ತೂರಿಮಹಲ್’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ನಟಿ ಶಾನ್ವಿ ಶ್ರೀವಾಸ್ತವ್ ಕೂಡ ಚಿತ್ರ ತಂಡದ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಅಂದಹಾಗೆ, ಇದೇ ಅಕ್ಟೋಬರ್ ಮೊದಲ ವಾರದಿಂದ “ಕಸ್ತೂರಿ ಮಹಲ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ, “ಕಸ್ತೂರಿ ಮಹಲ್’ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದ ಬಹುಭಾಗ ದೃಶ್ಯಗಳನ್ನು ಅಲ್ಲಿಯೇ ಸೆರೆಹಿಡಿಯುವ ಯೋಚನೆಯಲ್ಲಿದೆ ಚಿತ್ರತಂಡ. ಇನ್ನು “ಕಸ್ತೂರಿ ಮಹಲ್’ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶಾನ್ವಿ ಶ್ರೀವಾಸ್ತವ್ ಕೂಡ ಚಿತ್ರೀಕರಣವನ್ನುಎಂಜಾಯ್ ಮಾಡುತ್ತಿದ್ದಾರಂತೆ. ಮೊದಲ ಬಾರಿಗೆ ದಿನೇಶ್ ಬಾಬು ಅವರಂಥ ಹಿರಿಯ ಜೊತೆ ಕೆಲಸ ಮಾಡುತ್ತಿರುವುದು, ಒಂದು ವಿಭಿನ್ನ ಅನುಭವ ಶಾನ್ವಿ, ಚಿತ್ರದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ
“ನನ್ನ ಫಸ್ಟ್ ಸಿನಿಮಾದ ನಂತರ ಅದಕ್ಕೆ ಹತ್ತಿರವಿರುವಂಥ ಇನ್ನೊಂದು ಕ್ಯಾರೆಕ್ಟರ್ ನನಗೆ ಸಿಕ್ಕಿರಲಿಲ್ಲ. ಈ ಸಿನಿಮಾದಲ್ಲಿ ಅಂಥದ್ದೊಂದು ಕ್ಯಾರೆಕ್ಟರ್ ನನಗೆ ಸಿಕ್ಕಿರುವುದಕ್ಕೆ ಖುಷಿಯಾಗ್ತಿದೆ. ನನ್ನಕ್ಯಾರೆಕ್ಟರ್ ತುಂಬ ಡಿಫರೆಂಟ್ ಆಗಿದ್ದು, ಡೈರೆಕ್ಟರ್ ಕೂಡ ನನ್ನ ಕ್ಯಾರೆಕ್ಟರ್‌ನ ಅಷ್ಟೇ ಚೆನ್ನಾಗಿ ಚಿತ್ರೀಕರಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಹತ್ತಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ದಿನೇಶ್ ಬಾಬು ಅವರಂಥ ಸೀನಿಯರ್‌ಡೈರೆಕ್ಟರ್ ಜೊತೆಗೆ ವರ್ಕ್ ಮಾಡೋದೆ ಒಂದು ಡಿಫರೆಂಟ್ ಎಕ್ಸ್‌ಪೀರಿಯನ್ಸ್’ ಎನ್ನುತ್ತಾರೆ ಶಾನ್ವಿ.
ಇನ್ನು ಸದ್ಯ ಚಿತ್ರೀಕರಣ ನಡೆಯುತ್ತಿರುವ ಕೊಟ್ಟಿಗೆಹಾರ ಲೊಕೇಶನ್‌ಕೂಡ ಶಾನ್ವಿಗೆಹೊಸ ಹುರುಪು ನೀಡಿದೆಯಂತೆ. “ಇಲ್ಲಿನ ಲೊಕೇಶನ್ ತುಂಬ ಹಸಿರಾಗಿದೆ. ಒಂದೆಡೆ ಮಳೆ, ಮತ್ತೂಂದೆಡೆ ಚಳಿ. ಇವೆರಡರ ನಡುವೆ ಶೂಟಿಂಗ್ ನಡೆಯುತ್ತಿದೆ. ಸಬ್ಜೆಕ್ಟ್ ಗೆ ದಿ ಬೆಸ್ಟ್ ಎನಿಸುವಂಥ ಲೊಕೇಶನ್ ಅನ್ನು ಹುಡುಕಿ ಶೂಟಿಂಗ್ ಮಾಡಲಾಗ್ತಿದೆ.ಕನ್ನಡ ಆಡಿಯನ್ಸ್ ಈ ಸಿನಿಮಾದಲ್ಲಿ ಸ್ಕ್ರೀನ್ ಮೇಲೆ ಒಳ್ಳೆಯ ಲೊಕೇಶನ್‌ಗಳನ್ನು ಕಣ್ತುಂಬಿಕೊಳ್ಳಬಹುದು. ವಿಷ್ಯುವಲ್ ಟ್ರೀಟ್‌ಮೆಂಟ್ ಕೂಡ ಈ ಸಿನಿಮಾದ ಹೈಲೈಟ್ಸ್‌ಗಳಲ್ಲಿ ಒಂದಾಗಲಿದೆ’ ಎನ್ನುವುದು ಶಾನ್ವಿ ಮಾತು.