Advertisement
ಒಂದೆರೆಡು ದಿನಗಳಲ್ಲಿ ರಾಜ್ಯಕ್ಕೆ ಕರೆತರಲಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Related Articles
ಕಿಮ್ಮನೆ ರತ್ನಾಕರರು ಇ.ಡಿ. ದಾಳಿ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕಚೇರಿ ಬಹಳ ವರ್ಷಗಳಿಂದ ಶಾರೀಕ್ ಕುಟುಂಬದ ಕಟ್ಟಡದಲ್ಲಿತ್ತು. ಶಾರಿಕ್ ಹೇಳಿಕೆ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ನನ್ನ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಅವರ ಮೇಲೆ ಇ.ಡಿ. ದಾಳಿ ಮಾಡಿಸುವಂತಹ ರಾಜಕೀಯ ದಾರಿದ್ರé ನನಗೆ ಬಂದಿಲ್ಲ ಎಂದರು.
Advertisement
ಕ್ಷೇತ್ರ ಹುಡುಕಾಟವೇ ಮುಗಿದಿಲ್ಲಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ, ಮಾಜಿ ಮುಖ್ಯಮಂತ್ರಿ, ವಿಪಕ್ಷದ ನಾಯಕರಿಗೆ ಕ್ಷೇತ್ರ ಹುಡುವುದೇ ಕೆಲಸ ಆಗಬಾರದು. ಹುಡುಕಾಟ ನಡೆಸುತ್ತಿದ್ದಾರೆ, ಸ್ಪರ್ಧೆ ಮಾಡಲು ಭಯಪಡುತ್ತಿದ್ದಾರೆ. ಶೋಚನೀಯ ಪರಿಸ್ಥಿತಿ ಇದ್ದು ಜನರ ಮೇಲೆ ನಂಬಿಕೆ ಕಳೆದುಕೊಂಡು ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡಾಡುತ್ತಿರುತ್ತಾರೆ. ಅವರು ಹಿಂದೆ ಬೇರೆಯವರನ್ನು ಸೋಲಿಸಿರಬಹುದು. ಹೀಗಾಗಿ ಈಗ ಅವರನ್ನು ಕಾರ್ಯಕರ್ತರು ಸೋಲಿಸುತ್ತಾರೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದರು.