Advertisement

ಕನ್ನಡ ರಾಜ್ಯೋತ್ಸವ ವೇಳೆ ಬಿಎಸ್ ವೈ, ಸಂತೋಷ್ ಮುನಿಸು ಬಹಿರಂಗ!

12:20 PM Nov 01, 2017 | Team Udayavani |

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಆಚರಣೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ನಡುವಿನ ಮುನಿಸು ಮತ್ತೆ ಬಹಿರಂಗವಾದ ಪ್ರಸಂಗ ಬುಧವಾರ ನಡೆಯಿತು.

Advertisement

ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣಕ್ಕೂ ಮುನ್ನ ಸಂತೋಷ್ ಅವರನ್ನು ಬಿಎಸ್ ವೈ ಮಾತನಾಡಿಸಿದರೂ ಮಾತನಾಡಿಲ್ಲವಾಗಿತ್ತು. ಅಲ್ಲದೇ ಸಂತೋಷ್ ಅವರನ್ನು ಬಿಎಸ್ ಯಡಿಯೂರಪ್ಪ ಕೈ ಸನ್ನೆ ಮೂಲಕ ಕರೆದರೂ ದೂರವೇ ಉಳಿದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಬಿಜೆಪಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೆ ಬಿಎಲ್ ಸಂತೋಷ್ ನೇರ ಕಾರಣ ಎಂದು ಬಿಎಸ್ ಯಡಿಯೂರಪ್ಪ ಆರೋಪಿಸಿದ್ದರು. ಬಳಿಕ ಬಿಜೆಪಿ ಹೈಕಮಾಂಡ್ ಉಭಯ ನಾಯಕರ ನಡುವೆ ಸಂಧಾನ ಮಾಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next