Advertisement

ಹಗರಣಗಳ ತನಿಖೆಗೆ ಬಿಜೆಪಿ ಸರ್ಕಾರ ಹೆದರುತ್ತಿದೆ: ಸಂತೋಷ ಲಾಡ್

05:49 PM Sep 24, 2022 | Team Udayavani |

ಕೊಪ್ಪಳ: ಬಿಜೆಪಿ ಭ್ರಷ್ಟಾಚಾರವು ಮಾಧ್ಯಮಗಳ ಮೂಲಕವೇ ಬಹಿರಂಗವಾಗಿದೆ. ಸರ್ಕಾರ ಇದನ್ನು ತನಿಖೆಗೆ ಕೊಡಲು ಹೆದರುತ್ತಿದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರದ ದಾಖಲೆ ಕೊಡಿ ಎನ್ನುತ್ತಿದ್ದಾರೆ. ಆದರೆ ಮಾಧ್ಯಮಗಳ ಮೂಲಕವೇ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿದೆ. ಅಲ್ಲದೇ, ಕೆಂಪಯ್ಯ ಅವರೇ 40 ಪರ್ಸೆಂಟ್ ಸರ್ಕಾರ ಎಂದು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಬಗ್ಗೆ ತನಿಖೆಯಾಗಲಿ ಎನ್ನುತ್ತಿದ್ದಾರೆ. ಲೋಕಾಯುಕ್ತ, ಸಿಐಡಿ, ನ್ಯಾಯಾಂಗ ತನಿಖೆಯಾದರೂ ಆಗಲಿ. ಆದರೆ ಬಿಜೆಪಿ ಸರ್ಕಾರ ತನಿಖೆಗೆ ಕೊಡಲು ಹೆದರುತ್ತಿದೆ. ಆಡಳಿತ ಪಕ್ಷಕ್ಕೆ ಸಿಕ್ಕಿಹಾಕಿಕೊಳ್ಳುವ ಭಯವಿದೆ. ಹಾಗಾಗಿ ತಾಕತ್ತಿನ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಎಂದರು.

ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಲಾಡ್, ಗುತ್ತಿಗೆ ಕೆಲಸದಲ್ಲಿ 40 ಪರ್ಸೆಂಟ್ ಕಮಿಷನ್ ನಡೆದಿರುವುದು ಬಹಿರಂಗವಾಗಿದೆ. ಬಿಜೆಪಿ ಸರ್ಕಾರ ಕಮಿಷನ್ ಸರ್ಕಾರ ಎನ್ನಲಾಗುತ್ತಿದೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ. ಪ್ರಧಾನಿಗೂ ಪತ್ರ ಬರೆದಿದ್ದಾರೆ. ಪ್ರತಾಪ ಸಿಂಹ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಇದನ್ನೂ ಓದಿ:ದೀರ್ಘಕಾಲದ ಕೋರ್ಟ್ ಎದುರಾಳಿ ವಿದಾಯ ಹೇಳುತ್ತಿದ್ದಂತೆ ಕಣ್ಣೀರಿಟ್ಟ ರಾಫೆಲ್ ನಡಾಲ್

ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಮಾಡಲು ಏಜೆಂಟರಿದ್ದರು ಎನ್ನುವ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾರಜೋಳ ಅವರು ಹಿರಿಯರು. ಅಧಿಕಾರದಲ್ಲಿರುವ ಸರ್ಕಾರ ತಪ್ಪು ಮಾಡಿದೆ ಎನ್ನುವುದನ್ನು ಅವರು ಮೊದಲು ಒಪ್ಪಿಕೊಳ್ಳಲಿ. ಕಾಟಾಚಾರಕ್ಕೆ ಏನಾದರೂ ಹೇಳಬೇಕೆಂದು ಹೇಳುತ್ತಿದ್ದಾರೆ ಎಂದರು.

Advertisement

ಮಾಜಿ ಸಿಎಂ ಪೋಸ್ಟರ್ ಅಂಟುವ ವಿಚಾರದ ಬಗ್ಗೆ ಸಚಿವ ಸುಧಾಕರ್ ಅವರು ವಿಪಕ್ಷ ನಾಯಕರಿಗೆ ನಾಚಿಕೆಯಾಗಬೇಕು ಎನ್ನುವ ಪದಬಳಕೆ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ. ಪೋಸ್ಟರ್ ಅಂಟಿಸಲು ಹಕ್ಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next