Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ವಿಚಾರ, ಹೈಕಮಾಂಡ್ ಸೂಚನೆ ಬಗ್ಗೆ ನನಗೇನೂ ಗೊತ್ತಿಲ್ಲ. ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಎರಡನ್ನೂ ಒಂದೇ ದೃಷ್ಟಿಯಲ್ಲಿ ನೋಡಬೇಕೆಂದು ಇಲ್ಲ. ಸಾರ್ವಜನಿಕರ ಅಭಿಪ್ರಾಯ ಗೌರವಿಸಬೇಕು. ಗಣಪತಿ ವಿಡಿಯೋ ಮಾಡಿ ಹೇಳಿಕೆ ನೀಡಿದ್ದರು. ಇಲ್ಲಿ ಸಂತೋಷ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾದ ಮೇಲೆ ಆತ್ಮಹತ್ಯೆ ನಡೆದಿದೆ. ಎರಡಕ್ಕೂ ಹೋಲಿಕೆ ಮಾಡಲು ಬರುವುದಿಲ್ಲ. ಎರಡೂ ಪ್ರಕರಣದಲ್ಲಿ ಜೀವ ಹಾನಿಯಾಗಿರುವುದು ದುರದೃಷ್ಟಕರ. ಟೆಂಡರ್ ಕರೆಯದೆ, ಕೆಲಸ ಮಂಜೂರಾಗದೆ ಕೋಟಿಗಟ್ಟಲೆ ಕೆಲಸ ಮಾಡಿಸಲು ಬರುತ್ತಾ? ಫೇಕ್ ವರ್ಕ್ ಆರ್ಡರ್ ನೀಡಲಾಗಿದ್ಯಾ ಎಂಬ ಎಲ್ಲಾ ವಿಷಯಗಳು ತನಿಖೆಯಿಂದ ತಿಳಿದು ಬರಬೇಕು. ಆದರೆ ಸಾವಿನ ಸುತ್ತ ಅನುಮಾನದ ಹುತ್ತ ಇರುವುದು ಸ್ಪಷ್ಟ. ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
Advertisement
ಸಂತೋಷ್ ಆತ್ಮಹತ್ಯೆ ಪ್ರಕರಣ ತನಿಖೆಯಾಗಲಿ: ರವಿ
02:36 PM Apr 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.