ಮುಂಬಯಿ : ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ಅರ್ವತ್ತರ ಸಂಭ್ರಮಾ ಚರಣೆಯಲ್ಲಿದ್ದು, ಆ ನಿಮಿತ್ತ ಪೂರ್ವಭಾವಿ ಸಭೆಯು ಜ. 6 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ ಎಲ್. ವಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದು ವಜ್ರಮಹೋತ್ಸವ ಸಂಭ್ರಮವನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿ ಸುವಂತೆ ನಿರ್ಧಾರಿಸಲಾಯಿತು. ಅದಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಯೋಜನೆಗಳನ್ನು ರೂಪಿಸಲಾಗಿ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳ ಆಯೋಜನೆ, ಅತಿಥಿ-ಗಣ್ಯರ ಆಹ್ವಾನ, ಸ್ಮರಣ ಸಂಚಿಕೆ ರಚನೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಯಿತು.ವಜ್ರಮಹೋತ್ಸವ ಆಚರಣೆಯ ಯಶಸ್ಸಿಗಾಗಿ ಸಮಿತಿಯೊಂದನ್ನು ರಚಿಸಲಾಯಿತು. ಸಮಿತಿಗೆ ಪ್ರಸಕ್ತ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡು ಡಾ| ಆರ್. ಕೆ. ಶೆಟ್ಟಿ ಕಲೀನಾ, ಎನ್. ಟಿ. ಪೂಜಾರಿ, ನಿತ್ಯಾನಂದ ಡಿ .ಕೋಟ್ಯಾನ್, ಸಿಎ ಪ್ರಕಾಶ್ ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ಸಿಎ ಸುನೀಲ್ ಶೆಟ್ಟಿ, ಸದಾನಂದ ಸಫಲಿಗ, ಭುಜಂಗ ಆರ್. ಶೆಟ್ಟಿ, ವಿವೇಕ್ ಶೆಟ್ಟಿ (ಟೆಂಡರ್‌ಫ್ರೆಶ್), ಪ್ರಕಾಶ್ ಸಿ. ಶೆಟ್ಟಿ, ಬಿ. ಆರ್. ರಾವ್ ಅವರನ್ನು ಆಯ್ಕೆಗೊಳಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ, ಗೌರವ ಪ್ರಧಾನ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಕಾರ್ಯದರ್ಶಿ ಶಕೀಲಾ ಪಿ. ಶೆಟ್ಟಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ, ವನಿತಾ ವೈ. ನೋಂದ, ಮಾಜಿ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗೋವಿಂದ ಆರ್. ಬಂಗೇರಾ, ಶಾರದಾ ಎಸ್. ಪೂಜಾರಿ, ಸುಮಾ ಎಂ. ಪೂಜಾರಿ, ಶಾಲಿನಿ ಎಸ್. ಶೆಟ್ಟಿ, ಆರ್. ಪಿ. ಹೆಗ್ಡೆ, ಸಲಹಾ ಸಮಿತಿಯ ಸದಸ್ಯರಾದ ನಾರಾಯಣ ಎಸ್. ಶೆಟ್ಟಿ, ಬಿ. ಆರ್. ಪೂಂಜಾ, ಎನ್. ಎಂ. ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್, ಲಿಂಗಪ್ಪ ಬಿ. ಅಮೀನ್, ವಿಜಯಕುಮಾರ್ ಕೆ. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಎಲ್. ವಿ. ಅಮೀನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಲಕ್ಷಿ¾à ಎನ್. ಕೋಟ್ಯಾನ್ ಪ್ರಾರ್ಥನೆ ಗೈದರು. ಗೌರವ ಪ್ರಧಾನ ಕಾರ್ಯ ದರ್ಶಿ ಸುಜಾತಾ ಆರ್. ಶೆಟ್ಟಿ ಸಭಾ ಕಲಾಪ ನಿರ್ವಹಿಸಿ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್