ಮುಂಬಯಿ: ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವ ಪ್ರಭಾತ್ ಕಾಲೋನಿಯ ಪೇಜಾವರ ಮಠದಲ್ಲಿ ಆ. 15 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯನ್ನು ಆಚರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಮಠದಲ್ಲಿ ನೆರೆದ ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ನಮಿಸಿದರು. ರಂಗಪೂಜೆ, ಚೆಂಡೆೆಸುತ್ತು, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ನಡೆಯಿತು. ಸಂಜೆ ಮಠದ ವಠಾರದಿಂದ ಪ್ರಭಾತ್ ಕಾಲೋನಿಯಾದ್ಯಂತ ಮುಂಬಯಿ ರಾಮದಾಸ್ ಮುತ್ತಪ್ಪ ಅವರ ಸಾಕೊÕàಫೋನ್, ವಾದ್ಯ, ಬ್ಯಾಂಡು ಚೆಂಡೆಗಳ ನಿನಾದದಲ್ಲಿ ಗೊಂಬೆಯಾಟ, ವಿವಿಧ ವೇಷಭೂಷಣ, ವೈವಿಧ್ಯಗಳೊಂದಿಗೆ ಶ್ರೀಕೃಷ್ಣ ವಿಟ್ಲ ಪಿಂಡಿ ಉತ್ಸವ ನಡೆಯಿತು.
ವಿದ್ವಾನ್ ವಿಷ್ಣುಮೂರ್ತಿ ಅಡಿಗ ಅವರು ಉತ್ಸವ ಬಲಿಯೊಂದಿಗೆ ಕೃಷ್ಣ ರಥೋತ್ಸವ ನಡೆಸಿದರು. ಬಳಿಕ ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಪೂರ್ಣಪ್ರಜ್ಞn ವಿದ್ಯಾಪೀಠ ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ| ಎ. ಎಸ್. ರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕು| ವಿಂದ್ಯಾ ಆಚಾರ್ಯ ಉಡುಪಿ ಅವರು ಭರತನಾಟ್ಯ ಹಾಗೂ ವಿದ್ವಾನ್ ಮುಕುಂದ ಪೈ ಕಾರ್ಕಳ ಅವರು ದಾಸವಾಣಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ ಉಡುಪಿ, ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಕಾರ್ಯನಿರತ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ಗೌರವ ಕಾರ್ಯದರ್ಶಿ ಬಿ. ಆರ್. ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿಯ ಸದಸ್ಯರು, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗೆr, ಎಸ್. ಸಾಬಕ್ಕ, ಶ್ರೀನಿವಾಸ ಭಟ್ ಪರೇಲ್, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಸುಧೀರ್ ಆರ್. ಎಲ್. ಭಟ್, ಗುಂಡು ಭಟ್ ಜೋಶಿ, ಮುಕುಂದ ಬೈತ್ತಮಂಗಳ್ಕರ್, ಲಕ್ಷೀನಾರಾಯಣ ಆಚಾರ್ಯ, ವಿಷ್ಣುತೀರ್ಥ ಸಾಳಿ, ರಾಘವೇಂದ್ರ ಭಟ್, ಮುರಳೀಧರ್ ಭಟ್ ಡೊಂಬಿವಿಲಿ, ರವಿ ಸುವರ್ಣ ಘಾಟ್ಕೊàಪರ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್