Advertisement
ಸೆ. 6 ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಲ್ಲವನ್ನು ಸವಿದಾಗ ಹೇಗೆ ಅದರ ನೈಜರುಚಿ ಅನುಭವ ಆಗುವುದೋ ಅದರಂತೆ ನಾರಾಯಣ ಗುರುಗಳ ಜೀವನ ತಿಳಿದಾಗಲೇ ಮಾನಸಿಕವಾಗಿ ಮಂತ್ರದೀಕ್ಷೆ ನೀಡಿದ ಮಹಾನುಭವಿ ಗುರುಗಳ ಶಕ್ತಿಯ ಅರಿವು ಆಗುವುದು. ಇಂತಹ ಪರಮ ಗುರುವನ್ನು ಬಲವಾಗಿ ಅಪ್ಪಿಕೊಂಡಾಗ ನಮ್ಮ ಅಭಯ ತನ್ನಿಂತಾನೇ ಆಗುವುದು. ಸ್ವತ್ಛಂದ ಬದುಕಿನ ಬ್ರಹ್ಮಶ್ರೀಗಳೇ ನಿಜವಾದ ಬ್ರಾಹ್ಮಣರಾಗಿದ್ದರು. ಆದ್ದರಿಂದಲೇ ಗುರುಗಳ ಅರ್ಚನೆಯಿಂದ ಭಕ್ತರ ರಕ್ಷಣೆಯಾಗುವುದು. ಇಂತಹ ನಾರಾಯಣ ನಾಮದ ಸ್ಮರಣೆಯ ಸಾರಾಮೃತ ಎಲ್ಲರ ನಾಲಗೆಯಲ್ಲಿ ಉಚ್ಚಾರ ಆಗುವಂತಾಗಲಿ ಎಂದರು.Related Articles
Advertisement
ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್, ಪುರುಷೋತ್ತಮ ಎಸ್. ಕೋಟ್ಯಾನ್, ಮಹೇಂದ್ರ ಸೂರು ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಪಯಜ್ಞ ನೆರವೇರಿಸಿದ ಪ್ರಭಾಕರ ಸಸಿಹಿತ್ಲು, ಭಾರತ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ ರಾಜಶೇಖರ್ ಕೆ. ಎಂ. ಬೆಂಗಳೂರು, ಪುರೋಹಿತರಾಗಿ ದೀಕ್ಷೆ ಸ್ವೀಕರಿಸಿದ ರವೀಂದ್ರ ಎ. ಅಮೀನ್, ಸಮಾಜ ಸೇವಕ ಸದಾಶಿವ ಎ. ಕರ್ಕೇರ ನಲಸೋಪರ ಮತ್ತಿತರರನ್ನು ಅಧ್ಯಕ್ಷರು ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.
ಪೂರ್ವಾಧ್ಯಕ್ಷ ಎಲ್. ವಿ. ಅಮೀನ್, ಲೀಲಾವತಿ ಜಯ ಸುವರ್ಣ, ಶಶಿ ನಿತ್ಯಾನಂದ್ ಕೋಟ್ಯಾನ್, ಯಶೋಧಾ ಎನ್. ಟಿ. ಪೂಜಾರಿ, ಪ್ರಭಾ ಎನ್. ಪಿ. ಸುವರ್ಣ, ಪೂಜಾ ಪುರುಷೋತ್ತಮ್, ಭವನದ ಪ್ರಬಂಧಕ ಭಾಸ್ಕರ್ ಟಿ. ಪೂಜಾರಿ, ಯುವಾಭ್ಯುದಯ ಉಪ ಸಮಿತಿಯ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಸೇವಾ ದಳಪತಿ ಗಣೇಶ್ ಕೆ. ಪೂಜಾರಿ, ಭಾರತ್ ಬ್ಯಾಂಕ್‌ನ ನಿರ್ದೇಶಕರು, ಉನ್ನತಾಧಿಕಾರಿಗಳು ಸೇರಿದಂತೆ ಅಸೋಸಿಯೇಶನ್‌ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಾಮಾಜಿಕ ಹಾಗೂ ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ ಸ್ವಾಗತಿಸಿದರು. ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ ಮತ್ತು ಜೊತೆ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್ ಅತಿಥಿಗಳನ್ನು ಪರಿಚಯಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಸಮಿತಿಯ ಗೌರವ ಕಾರ್ಯದರ್ಶಿ ರವೀಂದ್ರ ಎ. ಅಮೀನ್ ವಂದಿಸಿದರು.
ಮಹಾರಾಷ್ಟ್ರದಲ್ಲಿನ ಬಿಲ್ಲವರ ಮುಖ್ಯಾ ಲಯದಲ್ಲಿ ನಾರಾಯಣ ಗುರುಗಳ 163ನೇ ಜಯಂತ್ಯೋತ್ಸವ ಸ್ತುತ್ಯರ್ಹ ಸಂಭ್ರಮವಾಗಿದೆ. ಸಮುದಾಯದ ಸಂಸ್ಥೆಗಳ ವಿಲೀಣೀಕರಣದೊಂದಿಗೆ ಒಗ್ಗೂಡುವಿಕೆಯಿಂದ ಸಂಭ್ರಮಿಸುತ್ತಿರುವುದು ಅಭಿನಂದನೀಯ. ಇದರಿಂದ ಜಯ ಸುವರ್ಣರ ಗೌರವ ಹೆಚ್ಚಿಸಿದೆ. ಗುರುಗಳಿಗಿಂತ ಬಂಧು ಬೇರೊಂದಿಲ್ಲ. ಶ್ರದ್ಧೆಯಿಂದ ನಾವೂ ಸ್ವಗುರುಗಳಾಗಲು ಸಾಧ್ಯ – ಸದಾನಂದ ಕೋಟ್ಯಾನ್ (ಕಾರ್ಯಾಧ್ಯಕ್ಷರು: ಮೊಗವೀರ ಬ್ಯಾಂಕ್).
ಕಳೆದ ವರ್ಷ ಸಂಸ್ಥೆಯ ವ್ಯಕ್ತಿಯಾಗಿದ್ದು, ನಾರಾಯಣ ಗುರುಗಳ ಜಯಂತಿ ಇದೇ ವೇದಿಕೆಯಲ್ಲಿ ಆಚರಿಸಿದ್ದೆ. ಈ ಬಾರಿ ಸಂಸ್ಥೆಯ ಸ್ವ ಸಮುದಾಯದ ಶಕ್ತಿಯಾಗಿ ಇದೇ ವೇದಿಕೆಯಲ್ಲಿ ಗುರುಗಳನ್ನು ಆರಾಧಿಸುತ್ತಿರುವುದು ಮನಸ್ಸಿಗೆ ಶಾಂತಿಯೂ ಸಮುದಾಯಕ್ಕೆ ಸಮೃದ್ದಿœಯೂ ತಂದೊದಗಿಸಿದೆ. ಈ ಮೂಲಕ ಸಮಾಜವು ಬಲಯುತವಾಗಲಿ
– ಎನ್. ಟಿ. ಪೂಜಾರಿ (ಕಾರ್ಯಾಧ್ಯಕ್ಷರು : ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ). ಗುರು ಜಯಂತಿಯಂತಹ ಆಚರಣೆಯಿಂದ ಸಮುದಾಯದಲ್ಲಿ ಒಗ್ಗಟ್ಟಿನ ಶಕ್ತಿ ರೂಪಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಾವು ತೊಡಗಬೇಕು
– ಚಂದ್ರಶೇಖರ್ ಪೂಜಾರಿ (ನಿರ್ದೇಶಕರು : ಭಾರತ್ ಬ್ಯಾಂಕ್). ಆಗಿನ ಕಾಲಘಟ್ಟದಲ್ಲಿ ನಾರಾಯಣ ಗುರುಗಳು ಅಸ್ಪೃಶ್ಯತೆಮುಕ್ತ ಸಮಾಜಕ್ಕಾಗಿ ಶ್ರಮಿಸಿ ಸಾಮಾಜಿಕ ಸುಧಾರಣೆಯ ಹರಿಕಾರರಾಗಿದ್ದರು. ಎಲ್ಲರಿಗೂ ಶಿಕ್ಷಣ, ಸಮಾನತೆ ದೊರೆತು ಧರ್ಮ ಸುಧಾರಣೆಗಾಗಿ ಪ್ರಯತ್ನಿಸಿದ್ದರು. ಇಂತಹ ಪರಮ ಗುರುಗಳ ಪೌರತ್ವಶಾಹಿ ತಿಳಿಯುವ ಪ್ರಯತ್ನವಾಗಲಿ
– ಚಂದ್ರಶೇಖರ ಪಾಲೆತ್ತಾಡಿ (ಅಧ್ಯಕ್ಷರು : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ). ಚಿತ್ರ-ವರದಿ : ರೋನ್ಸ್ ಬಂಟ್ವಾಳ್