Advertisement

ಹನುಮಾನ್‌ಗೆ ಸಾಂತಕ್ಲಾಸ್‌ ವಿವಾದ

12:30 AM Jan 01, 2019 | Team Udayavani |

ಅಹಮದಾಬಾದ್‌: ಹನುಮಂತನನ್ನು ದಲಿತ, ಜೈನ, ಮುಸ್ಲಿಂ ಎಂದೆಲ್ಲ ಕರೆದು ವಿವಾದವನ್ನೆಬ್ಬಿಸಿದ ನಂತರ ಇದೀಗ ಗುಜರಾತ್‌ಲ್ಲಿ ವಿಶಿಷ್ಟ ವಿವಾದ ಹುಟ್ಟಿಕೊಂಡಿದೆ. ಸಾರಂಗ್‌ಪುರದಲ್ಲಿರುವ ಹನುಮಂತನ ದೇಗುಲದಲ್ಲಿರುವ ಹನುಮಂತನ ಮೂರ್ತಿಗೆ ಸಾಂತಾ ಕ್ಲಾಸ್‌ ಉಡುಪು ತೊಡಿಸಲಾಗಿದೆ. ಇದು ಮಾರುತಿ ಮಂದಿರಕ್ಕೆ ಆಗಮಿಸಿದ ಭಕ್ತ ರಿಗೆ ಇರಿಸುಮುರಿಸು ಉಂಟು ಮಾಡಿದ್ದು, ದೇಗು ಲದ ಆಡಳಿತ ಮಂಡಳಿಗೆ ತಮ್ಮ ಆಕ್ಷೇಪವನ್ನು ತಿಳಿಸಿದ್ದಾರೆ. ಆದರೆ ಈ ಉಡು ಪನ್ನು ಅಮೆರಿಕ ದಲ್ಲಿರುವ ಭಕ್ತರು ಕಳುಹಿಸಿ ದ್ದಾರೆ. ಈ ಉಡುಪು ಉಣ್ಣೆಯದ್ದು. ಹೀಗಾಗಿ ಹನುಮಂತ ನಿಗೆ ಶೀತವಾಗದಂತೆ ಕಾಪಾಡುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ. ಆದರೆ ಆಕ್ಷೇಪ ವ್ಯಕ್ತಪಡಿಸುವ ಭಕ್ತರ ಸಂಖ್ಯೆ ಹೆಚ್ಚಾದಂತೆ ದೇಗುಲದ ಆಡಳಿತ ಮಂಡಳಿಯು ಸಾಂತಾಕ್ಲಾಸ್‌ ಉಡುಪನ್ನು ತೆಗೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next