Advertisement

ಸಂಸ್ಕೃತ ವಿವಿ: ಕುಲಪತಿ ನಿವೃತ್ತಿ ವಯೋಮಿತಿ 67

03:45 AM Mar 25, 2017 | |

ವಿಧಾನಪರಿಷತ್ತು: ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳ ನಿವೃತ್ತಿ ವಯೋಮಿತಿಯನ್ನು 65ರಿಂದ 67 ವರ್ಷಕ್ಕೆ ಹೆಚ್ಚಳ ಮಾಡುವ ಸಂಬಂಧ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕಕ್ಕೆ ಮೇಲ್ಮನೆ ಒಪ್ಪಿಗೆ ನೀಡಿತು.

Advertisement

ವಿಧೇಯಕದ ಬಗ್ಗೆ ಪ್ರಸ್ತಾಪಿಸಿದ ಸಚಿವ ಬಸವರಾಜ ರಾಯರೆಡ್ಡಿ, “ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನಿವೃತ್ತಿ ವಯೋಮಿತಿ 67 ವರ್ಷವಿದ್ದು, ಸಂಸ್ಕೃತ ವಿವಿ ಕುಲಪತಿ ನಿವೃತ್ತಿ ವಯೋಮಿತಿ 65 ವರ್ಷವಿದೆ. ಏಕ ಪ್ರಕಾರದ ನಿವೃತ್ತಿ ವಯೋಮಿತಿ ನಿಗದಿಪಡಿಸುವ ಸಲುವಾಗಿ ತಿದ್ದುಪಡಿ ತರಲಾಗಿದೆ’ ಎಂದು ಹೇಳಿದರು.

ವಿಧೇಯಕ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಅರುಣ್‌ ಶಹಾಪುರ, ತಿದ್ದುಪಡಿ ವಿಧೇಯಕವನ್ನು ಮುಂದಿನ ನೇಮಕಾತಿಯಿಂದ ಜಾರಿಗೊಳಿಸಬೇಕೇ ಹೊರತು ಹಾಲಿ ಕುಲಪತಿಗೆ ಅನ್ವಯಗೊಳಿಸಬಾರದು’ ಎಂದು ಒತ್ತಾಯಿಸಿದರು. ಆದರೆ ಜೆಡಿಎಸ್‌ನ ಉಪನಾಯಕ ಶ್ರೀಕಂಠೇಗೌಡ, “ಹಾಲಿ ಕುಲಪತಿಗೆ ಅನ್ವಯಿಸಿ ಜಾರಿಗೊಳಿಸಿದರೂ ತಪ್ಪೇನಿಲ್ಲ’ ಎಂದು ತಿಳಿಸಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, “ರಾಜ್ಯದ ಎಲ್ಲ ವಿ.ವಿಗಳಿಗೆ ಸಮಾನವಾಗಿ ಅನ್ವಯಿಸುವ ವಿಧೇಯಕ ತರುವುದು ಸೂಕ್ತ. ಪ್ರತಿಯೊಂದು ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ತಿದ್ದುಪಡಿ ವಿಧೇಯಕ ಮಂಡಿಸಿದರೆ ಆಯ್ದ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟ ಸಂದೇಹ ಮೂಡಲಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ರಾಯರೆಡ್ಡಿ, “ಸದ್ಯದ ಕಾಯ್ದೆ ಪ್ರಕಾರ ವಿಶ್ವವಿದ್ಯಾಲಯ ಕುಲಪತಿಗಳ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ. ಹಾಗಾಗಿ ಸಮಗ್ರ ಕಾಯ್ದೆ ರೂಪಿಸಲಾಗುತ್ತಿದ್ದು, ಸದ್ಯ ಕರಡು ವಿಧೇಯಕ ಕಾನೂನು ಇಲಾಖೆ ಪರಿಶೀಲನೆಯಲ್ಲಿದೆ. ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next