Advertisement
“ಅನಾಮಿಕ ಮತ್ತು ಇತರೆ ಕಥೆಗಳು’ ಎನ್ನುವ ಕಥಾ ಸಂಕಲನದಿಂದ ಆಯ್ದಕೊಂಡ “ಅನಾಮಿಕ’ ಕಥೆಯೊಂದು “ಸಂಸ್ಕಾರ ಭಾರತ’ ಸಿನಿಮಾದಲ್ಲಿ ದೃಶ್ಯ ರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ “ಸಂಸ್ಕಾರ ಭಾರತ’ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು. ಕರ್ನಾಟಕ ಪ್ರಸ್ ಕ್ಲಬ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಟಿ. ಶಿವಕುಮಾರ್ ನಾಗರನವಿಲೆ, “ಸಂಸ್ಕಾರ ಭಾರತ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. “ಗ್ಲೋಬಲ್ ಮ್ಯಾನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಡಾ. ವಿ. ನಾಗರಾಜ್ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಸಂಸ್ಕಾರ ಭಾರತ’ ಸಿನಿಮಾಕ್ಕೆ ನಾಗೇಶ್ ಎನ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
Related Articles
Advertisement
“ಪ್ರಸ್ತುತ ಚರ್ಚೆಯಲ್ಲಿರುವ ಹತ್ತಾರು ಸಾಮಾಜಿಕ ವಿಷಯಗಳು ಈ ಸಿನಿಮಾದಲ್ಲಿದ್ದು, ನೈಜತೆಗೆ ಹತ್ತಿರವಿರುವಂತೆ ಸಿನಿಮಾ ತೆರೆಮೇಲೆ ಬರಲಿದೆ’ ಎಂಬುದು ಚಿತ್ರತಂಡದ ಮಾತು. “ಸಂಸ್ಕಾರ ಭಾರತ’ ಸಿನಿಮಾದ ಹಾಡುಗಳಿಗೆ ರಾಜ್ ಭಾಸ್ಕರ್ ಸಂಗೀತ ಸಂಯೋಜಿಸುತ್ತಿದ್ದು, ಹಿರಿಯ ಸಾಹಿತಿ ಡಾ. ದೊಡ್ಡೆರಂಗೇಗೌಡ ಹಾಡುಗಳಿಗೆ ಸಾಹಿತ್ಯ ರಚಿಸುತ್ತಿದ್ದಾರೆ. ಚಿತ್ರಕ್ಕೆ ಪಿ. ವಿ. ಆರ್. ಸ್ವಾಮಿ ಛಾಯಾಗ್ರಹಣ, ನಾಗೇಶ್ ನಾರಾಯಣ್ ಸಂಕಲನವಿದೆ.
ಕುಂದಾಪುರ, ಬೆಂಗಳೂರು ಸುತ್ತಮುತ್ತ ಸುಮಾರು 25 ದಿನಗಳ ಕಾಲ ಮೂರು ಹಂತಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ