Advertisement

ಚುನಾವಣೆಯಲ್ಲಿ ಗೆಲುವು; 34ರ ಹರೆಯದ ಮರಿನ್ ವಿಶ್ವದ ಅತ್ಯಂತ ಅತೀ ಕಿರಿಯ ಪ್ರಧಾನಮಂತ್ರಿ

09:55 AM Dec 10, 2019 | Nagendra Trasi |

ಹೆಲ್ಸಿಂಕಿ: ಫಿನ್ ಲ್ಯಾಂಡ್ ನ ಸೋಶಿಯಲ್ ಡೆಮೋಕ್ರಟ್ಸ್ 34 ವರ್ಷದ ಮಾಜಿ ಸಾರಿಗೆ ಸಚಿವೆಯನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು, ದೇಶದ ಇತಿಹಾಸದಲ್ಲಿಯೇ ಸನ್ನಾ ಮರಿನ್ ವಿಶ್ವದ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಭಾನುವಾರ ಪ್ರಧಾನಿ ಗಾದಿಗೆ ನಡೆದ ಮತದಾನದಲ್ಲಿ ಸನ್ನಾ ತಮ್ಮ ಪ್ರತಿಸ್ಪರ್ಧಿ ಆ್ಯನ್ ಟ್ಟಿ ರಿನ್ನೆ ವಿರುದ್ಧ ಕಡಿಮೆ ಅಂತರದಲ್ಲಿ ಜಯ ಸಾಧಿಸಿದ್ದರು. ಅಂಚೆ ಸಿಬ್ಬಂದಿಗಳ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವೈಫಲ್ಯ ಕಂಡು, ಮೈತ್ರಿಪಕ್ಷದ ಸೆಂಟರ್ ಪಾರ್ಟಿಯ ವಿಶ್ವಾಸಮತ ಕಳೆದುಕೊಂಡ ಹಿನ್ನೆಲೆಯಲ್ಲಿ ರಿನ್ನೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆ್ಯನ್ ಟ್ಟಿ ಜುಹಾನಿ ರಿನ್ನೆ ಅವರು 2019ರ ಜೂನ್ ನಿಂದ ಡಿಸೆಂಬರ್ 6ರವರೆಗೆ ಫಿನ್ ಲ್ಯಾಂಡ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 2014ರವರೆಗೆ ಸೋಶಿಯಲ್ ಡೆಮೋಕ್ರಟಿಕ್ ಪಕ್ಷದ ಮುಖಂಡರಾಗಿದ್ದರು. ಹಣಕಾಸು ಸಚಿವರಾಗಿ, ಫಿನ್ ಲ್ಯಾಂಡ್ ಉಪಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಕಿರಿಯ ವಯಸ್ಸಿನ ಹಿನ್ನೆಲೆಯಲ್ಲಿ ದಿಕ್ಕು ತಪ್ಪಿಸಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮರಿನ್, ವಿಶ್ವಾಸವನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕಠಿಣ ಕೆಲಸ ಮಾಡಬೇಕಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.

ನಾನು ನನ್ನ ವಯಸ್ಸು ಅಥವಾ ಲಿಂಗದ ಬಗ್ಗೆ ಯಾವತ್ತೂ ಆಲೋಚಿಸಿಲ್ಲ. ನಾನು ಕಾರಣಗಳ ಬಗ್ಗೆ ಚಿಂತಿಸುತ್ತೇನೆ…ಹೀಗಾಗಿ ನಾನು ರಾಜಕೀಯದಲ್ಲಿ ಅವಕಾಶ ಪಡೆದಿದ್ದೇನೆ. ಕೆಲವು ಆಲೋಚನೆಗಳ ವಿಶ್ವಾಸದಿಂದಾಗಿಯೇ ನಾವು ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಮಾಡಿರುವುದಾಗಿ ಹೇಳಿದರು.

Advertisement

ಮರಿನ್ (34ವರ್ಷ) ಜಗತ್ತಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದು, ಉಕ್ರೈನ್  ಪ್ರಧಾನಮಂತ್ರಿ ಓಲೆಕ್ಸಿ ಹೊಂಚರುಕ್ (35) ಈ ಮೊದಲು ವಿಶ್ವದ ಕಿರಿಯ ಪ್ರಧಾನಿ ಪಟ್ಟಿಯಲ್ಲಿದ್ದರು. ಇದೀಗ ಆ ಸ್ಥಾನ ಮರಿನ್ ಅವರದ್ದಾಗಿದೆ. ಕಳೆದ ಜೂನ್ ನಿಂದ  ರಿನ್ನೆ ಫಿನ್ ಲ್ಯಾಂಡ್ ನ ಸೆಂಟರ್ ಹಾಗೂ ಎಡಪಂಥೀಯ ಐದು ಪಕ್ಷಗಳ ಮೈತ್ರಿ ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಏತನ್ಮಧ್ಯೆ ಅಂಚೆ ಕಚೇರಿಯ 700 ಉದ್ಯೋಗಿಗಳ ಸಂಬಳವನ್ನು ಕಡಿತ ಮಾಡುವ ಯೋಜನೆ ಜಾರಿಗೊಳಿಸಲು ಮುಂದಾದಾಗ ಈ ಬಿಕ್ಕಟ್ಟು ತೀವ್ರಗೊಂಡ ನಂತರ ರಿನ್ನೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಅಂಚೆ ಇಲಾಖೆ ನಡೆಸಿದ ತೀವ್ರ ಪ್ರತಿಭಟನೆಗೆ ತಲೆಬಾಗಿದ ಫಿನ್ ಲ್ಯಾಂಡ್ ಸರ್ಕಾರ ನವೆಂಬರ್ ನಲ್ಲಿ ಅಂಚೆ ಇಲಾಖೆಯ ಪರಿಷ್ಕೃತ ಯೋಜನೆಯನ್ನು ವಾಪಸ್ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next