Advertisement

Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ

07:48 PM Jan 14, 2025 | Team Udayavani |

ಗಂಗಾವತಿ: ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಸಾವಿರಾರು  ಜನರು ತುಂಗಭದ್ರಾ ನದಿಯಲ್ಲಿ ಮಿಂದು ಪುಣ್ಯ ಸ್ನಾನ ಮಾಡಿದರು. ಕುಟುಂಬದ ಜೊತೆಗೂಡಿ ಮನೆಯೂಟ ಸವಿದು ಹಬ್ಬ ಆಚರಣೆ ಮಾಡಿದರು.

Advertisement

ತಾಲೂಕಿನ ದೇವಘಟ್ ಆನೆಗೊಂದಿ, ಋಷಿಮುಖ ಪರ್ವತ, ಹನುಮನಹಳ್ಳಿ, ಚಿಂತಾಮಣಿ, ನವವೃಂದಾವನಗಡ್ಡಿ, ವಿರೂಪಾಪೂರಗಡ್ಡಿ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ಕುಟುಂಬದ ಜೊತೆ ಸೇರಿ ಸಂಕ್ರಾಂತಿ ಹಬ್ಬದ ಪುಣ್ಯ ಸ್ನಾನ ಮಾಡಿದರು.

ನಂತರ ಸಮೀಪದಲ್ಲಿರುವ ಕಿಷ್ಕಿಂಧಾ ಅಂಜನಾದ್ರಿ, ಪಂಪ ಸರೋವರ ವಾಲಿಕೀಲ್ಲಾ ಆದಿಶಕ್ತಿ ದೇಗುಲ ಋಷಿಮುಕ ಪರ್ವತದಲ್ಲಿರುವ ಸುಗ್ರೀವ ಮತ್ತು ಚಂದ್ರಮೌಳೇಶ್ವರ ಮತ್ತು ಚಿಂತಾಮಣಿಯಲ್ಲಿರುವ ಶಿವಲಿಂಗಕ್ಕೆ ವಿಶೇಷ ಪೂಜೆ ಮಾಡಿದರು.

ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಜನಸ್ತೋಮ: ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದರು.

Advertisement

ಬೆಟ್ಟದ ಎಡಬಾಗದಿಂದ ಹತ್ತಿ ಬಲಭಾಗದಿಂದ ಇಳಿಯುವ ವ್ಯವಸ್ಥೆ ಮಾಡಲಾಗಿತ್ತು. ಗಂಗಾವತಿ ಹುಲಿಗಿ ರಸ್ತೆಯಿಂದ ಬೆಟ್ಟದವರೆಗೂ ಕ್ಯೂನಲ್ಲಿ ಜನರು ನಿಂತು ದೇವ ದರ್ಶನ ಮಾಡಿದರು. ಗ್ರಾಮೀಣ ಪೊಲೀಸರು ಸೂಕ್ತ ಬಂದೋಬಸ್ ಮತ್ತು ಸಂಚಾರದ ಘಟನೆ ನಿಯಂತ್ರಿಸಿದರು.

ನದಿ ಸ್ನಾನದ ಸಂದರ್ಭದಲ್ಲಿ ಯಾವುದೇ ಅನಾಹುತ ಮತ್ತು ಸಂಚಾರ ದಟ್ಟಣೆ ತಡೆಯಲು ಗ್ರಾಮೀಣ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.