ವಿದ್ವಾನ್ ಆರ್.ಕೆ. ಶ್ರೀಕಂಠನ್ ಟ್ರಸ್ಟ್ ವತಿಯಿಂದ 25ನೇ “ಸಂಕ್ರಾಂತಿ ಸಂಗೀತ ಹಬ್ಬ’ ಹಾಗೂ ಆರ್. ಕೆ. ಶ್ರೀಕಂಠನ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜ.14 ಮಂಗಳವಾರ ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಶ್ರೀಕಂಠನ್ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ, ಖ್ಯಾತ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ ಅವರಿಂದ ಸ್ವಾಗತ ನೃತ್ಯ, ಶ್ರೀಕಂಠನ್ ಕುರಿತಾಗಿ ಶತಾವಧಾನಿ ಆರ್ ಗಣೇಶ್ ಅವರಿಂದ ಭಾಷಣ ನಡೆಯಲಿದೆ. ಸಂಜೆ 5 ಗಂಟೆಗೆ, ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರ ಸಾನ್ನಿಧ್ಯದಲ್ಲಿ, ಸಂಸದ ತೇಜಸ್ವಿ ಸೂರ್ಯ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಇದೇ ವೇಳೆ, ಸಂಗೀತ ಕಲಾನಿಧಿ ಡಾ. ಚಂದ್ರಶೇಖರನ್ ಅವರಿಗೆ, “ಶ್ರೀ ಶಾರದಾ ಶಂಕರ ಪುರಸ್ಕಾರ’ (ಶ್ರೀಕಂಠ ಶಂಕರ ಬಿರುದು) ಹಾಗೂ ಕೃಷ್ಣಮೂರ್ತಿ ಶಾಸ್ತ್ರಿಗಳ್ ಅವರಿಗೆ “ಶಂಕರಾದ್ವೈತ ತತ್ವಜ್ಞ’ ಬಿರುದು ನೀಡಿ ಗೌರವಿಸಲಾಗುವುದು. ಸಂಜೆ 6.30ರಿಂದ, ರಂಜನಿ ಮತ್ತು ಗಾಯತ್ರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ಸಂಗೀತ ಹಬ್ಬದ ಉಳಿದ ಕಾರ್ಯಕ್ರಮಗಳು ಜ.15ರಿಂದ 23ರವರೆಗೆ, ಮಲ್ಲೇಶ್ವರದ ಸಂಗೀತಸದನದಲ್ಲಿ ನಡೆಯಲಿವೆ.
ಎಲ್ಲಿ?: ಚೌಡಯ್ಯ ಮೆಮೋರಿಯಲ್ ಹಾಲ್, ವಯ್ನಾಲಿಕಾವಲ್ (ಉದ್ಘಾಟನೆ), ಸೇವಾಸದನ, ಮಲ್ಲೇಶ್ವರ (ಜ.15-23)
ಯಾವಾಗ?: ಜ.14, ಮಂಗಳವಾರ ಸಂಜೆ 4 (ಉದ್ಘಾಟನೆ) ಜ.15-23, ಸಂಜೆ 5-9