Advertisement

ಸಂಕ್ರಾಂತಿ ಬದಲಾವಣೆ ಪರ್ವ: ಕುಷ್ಟಗಿ

06:50 AM Jan 14, 2019 | |

ಕಲಬುರಗಿ: ಸಂಕ್ರಾಂತಿ ಕೇವಲ ಹಬ್ಬವಲ್ಲ. ಬದಲಿಗೆ, ಅನೇಕ ಮೌಲ್ಯಗಳನ್ನು ಸಾರುವ ವಾಹಕವಾಗಿದೆ. ಸೂರ್ಯ ತನ್ನ ದಿಕ್ಕನ್ನು ಬದಲಿಸುವ ಮೂಲಕ ಪ್ರಕೃತಿಯಲ್ಲಿ ಬದಲಾವಣೆ ಆಗುವುದರ ಜೊತೆಗೆ ಮಾನವನು ಬದುಕಿನ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂದು ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಹೇಳಿದರು.

Advertisement

ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗ, ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ಜಗತ್‌ ವೃತ್ತದ ಬಳಿಯಿರುವ ಸಂಸ್ಥೆಯ ಕಚೇರಿಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದ ಸಂಸ್ಕೃತಿ, ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡದೇ ನಮ್ಮದೇ ಆದ ಭವ್ಯ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ. ಈ ನಿಟ್ಟಿನಲ್ಲಿ ಹಬ್ಬಗಳು ತನ್ನದೇ ಆದ ಮಹತ್ವ ಪಡೆದಿವೆ. ಇಂತಹ ಹಬ್ಬಗಳ ಮೇರು ಸಂದೇಶವನ್ನು ವಿಶ್ವಸಂಸ್ಥೆಗೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದರು.

ಬಳಗದ ಅಧ್ಯಕ್ಷ, ಚಿಂತಕ ಎಚ್.ಬಿ. ಪಾಟೀಲ, ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಕೈಲಾಸನಾಥ ದೀಕ್ಷಿತ ಮಾತನಾಡಿದರು.

ಕವಿಗಳಾದ ಡಾ.ಸವಿತಾ ಸಿಡಿೋರ್ಜಿ, ಬಸವರಾಜ ಚಿನ್ನ ಸಂಕ್ರಾಂತಿ ಹಬ್ಬದ ಕುರಿತು ಸ್ವರಚಿತ ಕವಿತೆ ಪ್ರಸ್ತುತಪಡಿಸಿದರು. ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾದ ದೇಗಾಂವ, ಕಾರ್ಯದರ್ಶಿ ರಾಜಶೇಖರ ಮರಡಿ, ಸಹ ಸಂಚಾಲಕ ಅಮರನಾಥ ಶಿವಮೂರ್ತಿ, ಸದಸ್ಯರಾದ ಶಿವಕುಮಾರ ತಿಮಾಜಿ, ಸೋಮಶೇಖರ ಮೂಲಗೆ, ಬಸವರಾಜ ಪುರಾಣಿಕ ವೀರೇಶ ನಾವದಗಿ, ಪ್ರಕಾಶ ನಾಗರಾಳ, ಬಸವರಾಜ ಮಳ್ಳಿ, ಕೇಂದ್ರದ ಕಾರ್ಯಕರ್ತ ಶಿವಕುಮಾರ ಫುಲಾರಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next