Advertisement

ಶಂಕರನಾರಾಯಣ: ಬಾವಿಗೆ ಬಿದ್ದ  ಚಿರತೆಯ ರಕ್ಷಣೆ

11:16 AM Dec 04, 2017 | Team Udayavani |

ಕುಂದಾಪುರ: ಶಂಕರನಾರಾಯಣ ವ್ಯಾಪ್ತಿಯಲ್ಲಿ ನಾಯಿ ಅಟ್ಟಿಸಿಕೊಂಡು ಬಂದ ಭಾರೀ ಗಾತ್ರದ ಚಿರತೆಯೊಂದು 30 ಅಡಿ ಆಳದ ಬಾವಿಗೆ ಶುಕ್ರವಾರ ರಾತ್ರಿ ಬಿದ್ದಿದೆ. ಬಳಿಕ ಚಿರತೆಯನ್ನು ಸ್ಥಳೀಯರು, ಅರಣ್ಯಾಧಿಕಾರಿ, ಸಿಬಂದಿಗಳು ರಕ್ಷಿಸಿದ್ದು, ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.  

Advertisement

ತಲಾರಿ ರವಿಶಂಕರ ಅವರ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಸುಮಾರು 30 ಆಳದ, 10 ಅಡಿ ನೀರಿರುವ ಆವರಣವಿದ್ದ ಬಾವಿಗೆ ಬಿದ್ದಿದೆ. ಬೊಬ್ಬೆ ಹಾಕುತ್ತಿದ್ದ ಚಿರತೆಯ ಸದ್ದು ಕೇಳಿದ್ದರಿಂದ ಎಚ್ಚರಗೊಂಡ ಮನೆಯವರು ಕೂಡಲೇ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ತತ್‌ಕ್ಷಣ ಆಗಮಿಸಿದ ಶಂಕರನಾರಾಯಣ ಅರಣ್ಯಾಧಿಕಾರಿ ಎ.ಎ. ಗೋಪಾಲ್‌ ಹಾಗೂ ಅವರ ತಂಡ ಬಲೆಯ ಸಹಾಯದಿಂದ 3 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಬೋನಿಗೆ ಹಾಕಿ ಕಾಡಿಗೆ ಬಿಡಲಾಗಿದೆ. ಕಾರ್ಯಾಚರಣೆಯಲ್ಲಿ  ವನಪಾಲಕರಾದ ಹರೀಶ ಕೆ., ಸಂತೋಷ ದೇವಾಡಿಗ, ಅರಣ್ಯ ರಕ್ಷಕರಾದ ಗುರುರಾಜ್‌, ಶ್ರೀಶಾಂತ್‌, ರವೀಂದ್ರ, ಶಿವು, ಪ್ರಕಾಶ, ಮೋಹನ, ಸ್ಥಳೀಯ ಸಮೃದ್ಧಿ ಯುವಕ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು. 

ಹೆಚ್ಚುತ್ತಿರುವ ಚಿರತೆ ಹಾವಳಿ ಇತ್ತೀಚೆಗೆ ಶಂಕರನಾರಾಯಣ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ ಭಯಭೀತರಾಗಿದ್ದಾರೆ. ಉಳ್ಳೂರಿನಲ್ಲಿ ಬಾವಿಗೆ ಬಿದ್ದ ಚಿರತೆ ಯನ್ನು ರಕ್ಷಿಸಲಾಗಿತ್ತು. ಇತ್ತೀಚೆಗೆ ಕುಪ್ಪಾರಿನಲ್ಲಿ ಬಚ್ಚಲು ಮನೆಯಲ್ಲಿ ಅವಿತುಕೊಂಡಿದ್ದ ಚಿರತೆಯಿಂದ ಆತಂಕ ಮೂಡಿಸಿತ್ತು. ಜನ ನಿರ್ಭೀತಿಯಿಂದ ಸಂಚರಿಸಲು ಕಷ್ಟವಾಗುತ್ತಿದ್ದು, ಆತಂಕಗೊಂಡಿದ್ದಾರೆ ಎಂದು ಗ್ರಾಮ ಅರಣ್ಯ ಸಮಿತಿಯ ಕಾರ್ಯ ನಿರ್ವಹಣ ಸದಸ್ಯ ಚಿಟ್ಟೆ ರಾಜ ಗೋಪಾಲ ಹೆಗ್ಡೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next