Advertisement

ಆರ್ಥಿಕ ವೈಫಲ್ಯಕ್ಕೆ ದೇವರನ್ನು ದೂಷಿಸುತ್ತಿದ್ದಾರೆ: ರಾವುತ್‌

07:00 PM Sep 08, 2020 | Suhan S |

ಮುಂಬಯಿ, ಸೆ. 7: ಭಾರತದ ಆರ್ಥಿಕತೆಯ ವೈಫಲ್ಯಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇವರುಗಳನ್ನು ದೂಷಿಸುತ್ತಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್‌ ರಾವುತ್‌ ರವಿವಾರ ಆರೋಪಿಸಿದ್ದಾರೆ.

Advertisement

ಪ್ರಧಾನಿ ಮೋದಿ ಅವರು ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಾರೆ, ಆದರೆ ವಿಫಲವಾದ ಆರ್ಥಿಕತೆ ಮತ್ತು ಅದಕ್ಕೆ ಸಂಬಂ ಧಿತ ವಿಷಯಗಳನ್ನು ಸ್ಪರ್ಶಿಸಲು ನಿರಾಕರಿಸುತ್ತಾರೆ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ರಾವುತ್‌ ಹೇಳಿದ್ದಾರೆ.

ಕೋವಿಡ್ ಸೋಂಕು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಇದು ದೇವರ ಕಾರ್ಯವಾಗಿದ್ದು, ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಹಿನ್ನಡೆ ಕಾಣಲಿದೆ ಎಂದು ಸೀತಾರಾಮನ್‌ ಕಳೆದ ತಿಂಗಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾವುತ್‌, ದೇವರನು ಅಪರಾಧಿ ಎಂದು ಉಚ್ಚರಿಸಿದರೆ, ಯಾವ ನ್ಯಾಯಾಲಯದಲ್ಲಿ ಅದರ ವಿಚಾರಣೆ ನಡೆಸಬೇಕು? ಎಂದಿದ್ದಾರೆ. ನೋಟು ಅಪಮೌಲಿÂàಕರಣದಿಂದ ಹಿಡಿದು ಲಾಕ್‌ಡೌನ್‌ ವರೆಗೆ ಆರ್ಥಿಕತೆಯು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಗಿದೆ. ಆದರೆ ಕೇಂದ್ರ ಹಣಕಾಸು ಸಚಿವೆ ಇದಕ್ಕೆ ನೇರವಾಗಿ ದೇವರನ್ನು ದೂಷಿಸಿದ್ದಾರೆ. ಇದು ಹಿಂದುತ್ವದ ಅವಮಾನ. ಇದು ಯಾವ ರೀತಿಯ ಹಿಂದುತ್ವ? ಎಂದು ರಾವುತ್‌ ಪ್ರಶ್ನಿಸಿದ್ದಾರೆ.

ಕೋವಿಡ್‌ ಸೋಂಕಿಗೂ ಮುಂಚೆಯೇ ದೇಶದ ಆರ್ಥಿಕತೆ ಕುಸಿದಿದೆ ಎಂದು ರಾವುತ್‌ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಶೇ. 23.9ರಷ್ಟು ಕುಸಿದಿದೆ. ಇದು ಮಾನವ ದೋಷ ಮತ್ತು ಅಸಡ್ಡೆ ಮನೋಭಾವದಿಂದಾಗಿದೆ ಎಂದು ರಾವುತ್‌ ದೂರಿದ್ದಾರೆ. ಕೋವಿಡ್ ಸೋಂಕು ಮತ್ತು ಕುಸಿಯುತ್ತಿರುವ ಆರ್ಥಿಕತೆ ದೇವರ ಇಚ್ಛೆಯಾಗಿದೆ ಎಂದಾದರೆ ಸರಕಾರ ಮತ್ತು ಮಿಲಿಟರಿಯ ಆವಶ್ಯಕತೆ ಏನು. ದೇವರೇ ಎಲ್ಲವನ್ನೂ ನೋಡುಕೊಳ್ಳುತ್ತಾರೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next