Advertisement

ಆಸ್ಟ್ರೇಲಿಯ ಪ್ರವಾಸ: ಸಂಜಯ್‌ ಮಾಂಜ್ರೇಕರ್‌ ಮತ್ತೆ ಕಮೆಂಟೇಟರ್‌?

12:10 PM Nov 09, 2020 | keerthan |

ಮುಂಬಯಿ: ಟೀಮ್‌ ಇಂಡಿಯಾದ ಆಸ್ಟ್ರೇಲಿಯ ಪ್ರವಾಸದ ವೇಳೆ ಸಂಜಯ್‌ ಮಾಂಜ್ರೇಕರ್‌ ಮತ್ತೆ “ಕಮೆಂಟ್ರಿ ಟೀಮ್‌’ಗೆ ವಾಪಸಾಗುವ ಸಾಧ್ಯತೆ ಇದೆ. “ಮುಂಬೈ ಮಿರರ್‌’ ವರದಿ ಪ್ರಕಾರ ಅವರು ಈ ಸರಣಿಯ ಪ್ರಸಾರಕರಾದ “ಸೋನಿ ಪಿಕ್ಚರ್ ನೆಟ್‌ವರ್ಕ್‌’ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಇಂಗ್ಲಿಷ್‌ ಕಮೆಂಟ್ರಿ ತಂಡದಲ್ಲಿ ಸುನೀಲ್‌ ಗಾವಸ್ಕರ್‌, ಹರ್ಷ ಭೋಗ್ಲೆ, ಮೈಕಲ್‌ ಕ್ಲಾರ್ಕ್‌, ಗ್ಲೆನ್‌ ಮೆಗ್ರಾತ್‌ ಮತ್ತು ಆ್ಯಂಡ್ರ್ಯೂ ಸೈಮಂಡ್ಸ್‌ ಇರಲಿದ್ದಾರೆ. ಇವರೊಂದಿಗೆ ಮಾಂಜ್ರೇಕರ್‌ ಕೂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕಳೆದ ಮಾರ್ಚ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಂಡಾಗ ಸಂಜಯ್‌ ಮಾಂಜ್ರೇಕರ್‌ ಅವರನ್ನು ಬಿಸಿಸಿಐ ತನ್ನ ಕಮೆಂಟ್ರಿ ಪ್ಯಾನಲ್‌ನಿಂದ ಉಚ್ಚಾಟಿಸಿತ್ತು. ಅವರು ಕಮೆಂಟ್ರಿ ವೇಳೆ ಒಂದೆರಡು ವಿವಾದಗಳನ್ನು ಸೃಷ್ಟಿಸಿದ್ದೇ ಇದಕ್ಕೆ ಕಾರಣ. ಅನಂತರ ಎರಡು ಸಲ ಕ್ಷಮೆಯಾಚಿಸಿದರೂ ಬಿಸಿಸಿಐ ಮಾಂಜ್ರೇಕರ್‌ ಅವರನ್ನು ದೂರವೇ ಇರಿಸಿತ್ತು. ಐಪಿಎಲ್‌ ಕಮೆಂಟ್ರಿ ತಂಡದಲ್ಲೂ ಅವಕಾಶ ನೀಡಿರಲಿಲ್ಲ.

ಇದನ್ನೂ ಓದಿ:ಪ್ರತಿಭಾನ್ವಿತ ಪಡಿಕ್ಕಲ್‌ಗೆ ಭಾರತ ತಂಡದ ಬಾಗಿಲು ತೆರೆಯಲಿದೆ: ಸೌರವ್‌ ಗಂಗೂಲಿ

ಐಪಿಎಲ್ ಮುಗಿದ ನಂತರ ಭಾರತ ತಂಡ ದುಬೈನಿಂದಲೇ ಆಸೀಸ್ ಪ್ರವಾಸಕ್ಕೆ ತೆರಳಲಿದೆ. ನವೆಂಬರ್ 27ರಿಂದ ಜನವರಿ 19ರವರೆಗೆ ಸರಣಿ ನಡೆಯಲಿದೆ. ಮೂರು ಏಕದಿನ, ಮೂರು ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಭಾರತ ತಂಡವು ಆಸೀಸ್ ವಿರುದ್ಧ ಆಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next