Advertisement

Mudhol Movie: ಮುಧೋಳ್‌ ಜೊತೆ ಸಂಜನಾ

01:28 PM Mar 31, 2024 | Team Udayavani |

“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಆ ನಂತರ ದುನಿಯಾ ವಿಜಯ್‌ ಸಾರಥ್ಯದ ಸಲಗ ಮೂಲಕ ಸಿನಿ ಪ್ರೇಮಿಗಳ ಮುಂದೆ ಬಂದಿದ್ದು ಗೊತ್ತೇ ಇದೆ. ಈ ಗ್ಯಾಪ್‌ನಲ್ಲಿ ತೆಲುಗು ಚಿತ್ರರಂಗದ ಬಾಗಿಲು ಬಡಿದ ಸಂಜನಾ ಈಗ “ಮುಧೋಳ್‌’ ನಿರೀಕ್ಷೆಯಲ್ಲಿದ್ದಾರೆ.

Advertisement

ಹೌದು, ಸಂಜನಾ ಆನಂದ್‌ ಈಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ವಿಕ್ರಮ್‌ ಜೊತೆ ನಟಿಸಲು ಸಿದ್ಧರಾಗಿದ್ದಾರೆ. ವಿಕ್ರಮ್‌ ನಾಯಕರಾಗಿರುವ “ಮುಧೋಳ್‌’ ಚಿತ್ರ ಸೆಟ್ಟೇರಿದಾಗಿನಿಂದಲೂ ಸಂಜನಾ ನಾಯಕಿ ಎಂಬ ವಿಷಯ ಹರಿದಾಡಿತ್ತು. ಆದರೆ, ಚಿತ್ರತಂಡ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.  ಇತ್ತೀಚೆಗೆ ಸಂಜನಾ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಈ ವಿಷಯವನ್ನು ಅಧಿಕೃತಗೊಳಿಸಿದೆ.

ವಿಕ್ರಮ್‌ ಮುಧೋಳ್‌ ಸಿನಿಮಾದ ನಾಯಕಿಯಾಗಿರುವ ಸಂಜನಾ ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಇಲ್ಲಿವರೆಗೂ ಅವರು ನಟಿಸಿದ ವಿಭಿನ್ನ ಲುಕ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೇ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್‌ ರಾಜನ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಸಂಜನಾ ಆನಂದ್‌ ಮುಧೋಳ್‌ ಸಿನಿಮಾ ಜೊತೆಗೆ ದಿನಕರ್‌ ತೂಗುದೀಪ ನಿರ್ದೇಶನದ ರಾಯಲ್‌ ಹಾಗೂ ತೆಲುಗಿನ ಫ‌ುಲ್‌ ಬಾಟೆಲ್‌ ಎಂಬ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಧನ್ವೀರ್‌ ಗೌಡ ನಟಿಸುತ್ತಿರುವ ಹಯಗ್ರೀವ ಚಿತ್ರಕ್ಕೂ ನಾಯಕಿಯಾಗಿರುವ ಸಂಜನಾ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next