ಸಿರುಗುಪ್ಪ: ವಿಶ್ವವನ್ನೇ ತನ್ನ ಕಬಂಧ ಬಾಹುಗಳಿಂದ ಲಸಿಕೆ ಇಲ್ಲದ ರೋಗ ಹರಡುತ್ತಿರುವ ಸೂಕ್ಷ್ಮಾಣುಗಳನ್ನು ತಡೆಗಟ್ಟಲು ಸರ್ಕಾರ ಮುನ್ನೆಚ್ಚರಿಕೆಯಾಗಿ ಹಲವು ಕ್ರಮಗಳನ್ನು ಪಾಲಿಸಲು ತಿಳಿಸಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಕಾನೂನ ಕ್ರಮ ಜರುಗಿಸುತ್ತಿದೆ. ಸರ್ಕಾರಿ ಕಚೇರಿ, ಬ್ಯಾಂಕು, ಅಂಗಡಿಗಳಲ್ಲಿ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ಬಗ್ಗೆ ವ್ಯಾಪಕ ಪ್ರಚಾರ ನೀಡುತ್ತಿದೆ. ನಗರದ ಪೊಲೀಸ್ ಠಾಣೆಯಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ಚಿಮ್ಮಿಸುವ ಯಂತವನ್ನು ಅಳವಡಿಸಿದ್ದು ನೂತನ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಸ್ಯಾನಿಟೈಸರ್ ಸಿಂಪಡಿಸುವ ಯಂತ್ರವನ್ನು ಪೊಲೀಸ್ ಠಾಣೆ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದೆ. ಈ ಯಂತ್ರದ ಕೆಳಗೆ ಕೈಒಡ್ಡಿದರೆ ಸಾಕು, ಕೆಲವೇ ಕ್ಷಣಗಳಲ್ಲಿ ಕೈ ತೊಳೆಯಲು ಬೇಕಾದ ಪ್ರಮಾಣದ ಸ್ಯಾನಿಟೈಸರ್ ಬೀಳುತ್ತದೆ. ಈ ಸ್ಯಾನಿಟೈಸರ್ ಉತ್ತಮ ರೀತಿಯ ಸುವಾಸನೆ ಹೊಂದಿದ್ದು, ಕೈಗಳನ್ನು ಯಾವುದೇ ಮುಜುಗರವಿಲ್ಲದೆ ಸವರಿಕೊಳ್ಳುವ ರೀತಿಯಲ್ಲಿ ಉತ್ತಮವಾಗಿದೆ. ಜಿಲ್ಲಾ ಪೊಲೀಸ್ ಕಚೇರಿಯ ಹಿರಿಯ ಅಧಿಕಾರಿಗಳು ಈ ಯಂತ್ರವನ್ನು ನೀಡಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು, ಪದೇ ಪದೇ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಳ್ಳಲು ಈ ಯಂತ್ರವು ಸಹಕಾರಿಯಾಗಿದೆ.