Advertisement

ಗ್ರಾಪಂಗೊಂದು ಸ್ಯಾನಿಟರಿ ದಹನ ಯಂತ್ರ

10:52 AM Mar 14, 2021 | Team Udayavani |

ಬೆಂಗಳೂರು: ಗ್ರಾಮಗಳ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ ಬೆಂಗಳೂರು ನಗರ ಜಿಪಂ ಈಗ ತನ್ನ ವ್ಯಾಪ್ತಿಯ ಪ್ರತಿ ಗ್ರಾಮಪಂಚಾಯ್ತಿಗಳಲ್ಲಿ ಒಂದು “ಸ್ಯಾನಿಟರಿ ನ್ಯಾಪ್‌ ಕಿನ್‌ ದಹನ ಯಂತ್ರ’ ಅಳವಡಿಕೆ ಮುಂದಾಗಿದೆ.

Advertisement

ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವತ್ಛ ಭಾರತ್‌ ಮಿಷನ್‌ (ಗ್ರಾಮೀಣ)ಯಡಿ ದಹನಯಂತ್ರಗಳ ಅಳವಡಿಕೆಗೆ ಯೋಜನೆ ರೂಪಿಸಿದೆ.

ನಗರ ಜಿಪಂ ವ್ಯಾಪ್ತಿಯಲ್ಲಿ 93 ಗ್ರಾಪಂಗಳಲ್ಲಿವೆ. ಅವುಗಳಲ್ಲಿ ರಾಜಾನುಕುಂಟೆ,ದೊಡ್ಡಜಾಲ, ಸಿಂಗನಾಯಕನಹಳ್ಳಿ ಮತ್ತು ಶಾಂತಿಪುರ ಗ್ರಾಪಂ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಈಗಾಗಲೇಪ್ರಯೋಗಾರ್ಥವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ದಹನ ಯಂತ್ರಗಳನ್ನ ಅಳವಡಿಸಲಾಗಿದೆ. ಈಪ್ರಯೋಗ ಯಶಸ್ವಿಯಾದ ನಂತರ ನಗರ ಜಿಪಂ ಎಲ್ಲಾ ಗ್ರಾಪಂಗಳಲ್ಲಿ ದಹನ ಯಂತ್ರ ಅಳವಡಿಕೆಗೆ ಮುಂದಾಗಿದೆ.

ನಗರ ಜಿಪಂ ಸ್ವಚ್ಛ ಭಾರತ್‌ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಸಂಬಂಧ ಹಲವು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಕೇಂದ್ರೀಕರಿಸಿಯೇ ಯೋಜನೆ ರೂಪಿಸಿರುವುದೂ ಸೇರಿದೆ. ಬಳಕೆ ಮಾಡಿದಸ್ಯಾನಿಟರಿ ನ್ಯಾಪ್‌ಕಿನ್‌ಗಳಿಂದ ಹಲವುರೀತಿಯ ಅಪಾಯಗಳು ಎದುರಾಗುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ತಕ್ಷಣದಲ್ಲೇ ಅವುಗಳನ್ನು ದಹನ ಮಾಡಲುಸಲುವಾಗಿಯೇ ಪ್ರತಿ ಗ್ರಾಪಂಗೆ ಒಂದರಂತೆಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

18.6 ಲಕ್ಷ ರೂ.ಅನುದಾನ: ಗ್ರಾಪಂ ವ್ಯಾಪ್ತಿಯ ಘನತಾಜ್ಯ ನಿರ್ವಹಣಾ ಘಟಕಗಳಲ್ಲಿ ಈ ಯಂತ್ರಗಳನ್ನು ಅಳವಡಿಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಕಾರ್ಯಗತಕ್ಕಾಗಿಯೇಸುಮಾರು 18. 6ಲಕ್ಷ ರೂ. ಅನುದಾನ ಬಳಕೆಮಾಡಿಕೊಳ್ಳಲಾಗುತ್ತಿದೆ. ಸ್ವಚ್ಛ ಭಾರತ್‌ ಮಿಷನ್‌ ಅಡಿ ಪ್ರತಿ ಗ್ರಾಪಂಗೆ 20 ಸಾವಿರರೂ. ನೀಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಪಂ ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

Advertisement

ಸ್ಯಾನಿಟರಿ ನ್ಯಾಪ್‌ಕಿನ್‌ ದಹನ ಯಂತ್ರಗಳ ಅಳವಡಿಕೆ ಕುರಿತಂತೆ ಹಿರಿಯಅಧಿಕಾರಿಗಳೊಂದಿಗೆ ಸಮಾಲೋಚನೆಮಾಡಲಾಗಿದೆ. ಶೀಘ್ರದಲ್ಲೆ ಪ್ರತಿಯೊಂದು ಗ್ರಾಪಂಗಳಲ್ಲಿ ಯಂತ್ರಗಳ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.

ಕರಗುವ ಗುಣ ಕಡಿಮೆ :

ಘನ ತ್ಯಾಜ್ಯದಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಹಾನಿಕಾರಕ ತ್ಯಾಜ್ಯ ಮೂರು ವಿಧಗಳಿವೆ. ಹಾನಿಕಾರಕ ತ್ಯಾಜ್ಯದಲ್ಲಿ ನ್ಯಾಪ್‌ಕಿನ್‌ ಕೂಡ ಸೇರಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಕರಗುವ ಗುಣ ಕಡಿಮೆಯಿದೆ. ಹೀಗಾಗಿ ಇದು ಅಂತರ್ಜಲ ಕುಸಿತಕ್ಕೂ ಕಾರಣವಾಗಲಿದೆ. ಆ ಹಿನ್ನೆಲೆಯಲ್ಲಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ದಹನ ಮಾಡುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ ಎಂದು ನಗರ ಜಿಲ್ಲಾಡಳಿತದ ಸ್ವತ್ಛ ಭಾರತ್‌ ಮಿಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಯಂತ್ರ ಕಾರ್ಯನಿರ್ವಹಿಸಲು ವಿದ್ಯುತ್‌ ಬೇಕಾಗುತ್ತದೆ. ಇದನ್ನು ಆಯಾ ಗ್ರಾಪಂಗಳು ಸ್ಥಳೀಯ ಅನುದಾನದಿಂದ ಭರಿಸಬೇಕಾಗುತ್ತದೆ. ಈ ಬಗ್ಗೆ ಆಯಾ ಗ್ರಾಪಂಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ನಗರ ಜಿಲ್ಲಾಡಳಿತ ಗ್ರಾಮಗಳ ಸ್ವತ್ಛತೆಗೆ ಆದ್ಯತೆ ನೀಡಿದ್ದು ಅದನ್ನು ಕೇಂದ್ರೀಕರಿಸಿಯೇ ಯೋಜನೆಗಳನ್ನು ರೂಪಿಸುತ್ತಿದೆ. ಅದರ ಭಾಗವಾಗಿ ಈಗ ಪ್ರತಿ ಗ್ರಾಪಂಗಳ ಘನತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಒಂದು ಸ್ಯಾನಿಟರಿ ನ್ಯಾಪ್‌ ಕಿನ್‌ ದಹನ ಯಂತ್ರಗಳ ಅಳವಡಿಕೆ ಮಾಡಲಾಗುವುದು. ಡಾ.ಸಿದ್ದರಾಮಯ್ಯ, ನಗರ ಜಿಪಂ ಉಪ ಕಾರ್ಯದರ್ಶಿ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next