Advertisement

Wimbledon 2023: ನಿವೃತ್ತಿಯಾದರೂ ಸಾನಿಯಾ ಆಟ!

11:17 PM Jul 03, 2023 | Team Udayavani |

ಲಂಡನ್‌: ಭಾರತದ ಸ್ಟಾರ್‌ ಆಟಗಾರ್ತಿ ಸಾನಿಯಾ ಮಿರ್ಜಾ ಈಗಾಗಲೇ ಅಂತಾರಾಷ್ಟ್ರೀಯ ಟೆನಿಸ್‌ಗೆ ವಿದಾಯ ಹೇಳಿದ್ದಾರೆ. ಆದರೂ ಈ ಬಾರಿಯ ವಿಂಬಲ್ಡನ್‌ನಲ್ಲಿ ರ್ಯಾಕೆಟ್‌ ಹಿಡಿದು ಅಂಕಣಕ್ಕೆ ಇಳಿಯಲಿದ್ದಾರೆ!

Advertisement

ಹಾಗಾದರೆ ಸಾನಿಯಾ ಮಿರ್ಜಾ ನಿವೃತ್ತಿಯಿಂದ ಹಿಂದೆ ಸರಿದರೇ ಎಂಬುದು ನಿಮ್ಮ ಕುತೂಹಲವೇ? ಇಲ್ಲ, ಸಾನಿಯಾ ಮಿರ್ಜಾ ಆಡುವುದು ಆಮಂತ್ರಿತ ಲೆಜೆಂಡ್ಸ್‌ ಆಟಗಾರರ ವಿಭಾಗದಲ್ಲಿ. ಇಲ್ಲಿ ಅವರು ಬ್ರಿಟನ್‌ನ ಜೊಹಾನ್ನಾ ಕೊಂಟಾ ಜತೆಗೂಡಿ ಆಡಲಿದ್ದಾರೆ. ಕೊಂಟಾ ಮೊದಲು ಆಸ್ಟ್ರೇಲಿಯವನ್ನು ಪ್ರತಿನಿಧಿಸುತ್ತಿದ್ದರು. 2021ರಲ್ಲಿ ಟೆನಿಸ್‌ಗೆ ವಿದಾಯ ಘೋಷಿಸಿದ್ದರು.

4 ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಕಿಮ್‌ ಕ್ಲಿಸ್ಟರ್, ಮಾರ್ಟಿನಾ ಹಿಂಗಿಸ್‌ ಕೂಡ ಇಲ್ಲಿ ಆಡಲಿದ್ದಾರೆ.

ಬೋಪಣ್ಣ ಏಕೈಕ ಭಾರತೀಯ
ಈ ಬಾರಿಯ ವಿಂಬಲ್ಡನ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ಆಟಗಾರನೆಂದರೆ ರೋಹನ್‌ ಬೋಪಣ್ಣ. ಇದು ಅವರ 13ನೇ ವಿಂಬಲ್ಡನ್‌ ಪಂದ್ಯಾವಳಿಯಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next