Advertisement

ಮಾರ್ಷಲ್‌ ಆರ್ಟ್ಸ್ ಕಲಿಸುತ್ತೇವೆ…ಆದರೆ ಆರೆಸ್ಸೆಸ್‌ ಸೇನಾ ಪಡೆಯಲ್ಲ: ಭಾಗವತ್‌

11:23 AM Nov 29, 2021 | Team Udayavani |

ಗ್ವಾಲಿಯರ್‌: ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ಸೇನಾ ಸಂಸ್ಥೆಯಲ್ಲ; ಅದು ಕೌಟುಂಬಿಕ ವಾತಾವರಣವಿರುವ ಸಂಘಟನೆ ಎಂದು ಆರ್‌ಎಸ್‌ ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಹೈದ್ರಾಬಾದ್ ಟು ಗಂಗಾವತಿ: ಬಸ್ ಪ್ರಯಾಣದಲ್ಲಿ ಕೋಳಿಗೂ 463 ರೂ. ಟಿಕೆಟ್!

ಸಂಘಟನೆಯ ಮಧ್ಯ ಭಾರತ ಪ್ರಾಂತ್ಯದ ವಾದ್ಯ ವೃಂದವು ಏರ್ಪಡಿಸಿದ್ದ ನಾಲ್ಕು ದಿನಗಳ ಸಂಗೀತ ಶಿಬಿರ “ಘೋಷ್‌ ಶಿವಿರ್‌ ‘ನ ಸಮಾರೋಪ ಸಮಾರಂಭ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಭಾನುವಾರ ನಡೆಯಿತು. ಇಲ್ಲಿ ಭಾಗವಹಿಸಿದ್ದ ಅವರು, “ಸಂಘಟನೆಯ ಸದಸ್ಯರಿಗೆ ಮಾರ್ಷಲ್‌ ಆರ್ಟ್ಸ್ ಕಲಿಸುತ್ತೇವೆ.

ನಮ್ಮಲ್ಲಿ ವ್ಯಾಯಾಮ ಶಾಲೆಗಳಿವೆ. ಆದರೆ, ನಾವು ದೇಶಾದ್ಯಂತ ವ್ಯಾಯಾಮ ಶಾಲೆ ನಡೆಸುತ್ತಿಲ್ಲ ಅಥವಾ ನಮ್ಮ ಸಂಘಟನೆ ಮಾರ್ಷಲ್‌ ಆರ್ಟ್ಸ್ ಕ್ಲಬ್‌ ಅಲ್ಲ. ನಮ್ಮ ಸಂಘಟನೆಯನ್ನು ಅರೆಸೇನಾ ಪಡೆ ಎಂದೂ ಕರೆಯಲಾಗುತ್ತದೆ. ನಾವು ಸೇನೆಯೂ ಅಲ್ಲ” ಎಂದು ಅವರು ತಿಳಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತವನ್ನು ರೋಮಾಂಚನಕ್ಕಾಗಿ ಬಳಸುತ್ತಾರೆ. ಆದರೆ, ನಮ್ಮಲ್ಲಿ ಸಂಗೀತವನ್ನು ಆತ್ಮ ಸಂತೋಷಕ್ಕಾಗಿ ಆಲಿಸುತ್ತೇವೆ ಎಂದಿದ್ದಾರೆ.

ಜಾತಿ ಆಧಾರಿತ ಅಪರಾಧ ಇನ್ನೂ ತೊಲಗಿಲ್ಲ
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಲ್ಲಿನ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿವಾದದ ಪಿಡುಗನ್ನು ತೊಲಗಿಸಲು ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ವಿಷಾದಿಸಿದೆ. ಇದೇ ವೇಳೆ, ಜಾತಿ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ಸಾರಾಸಗಟಾಗಿ ನಿರಾಕರಿಸುವಂಥ ಮನೋಭಾವ ನಮ್ಮ ಸಮಾಜದಲ್ಲಿ ಇನ್ನಾದರೂ ಬೆಳೆಯಲಿ ಎಂದೂ ಆಶಿಸಿದೆ.

Advertisement

1991ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಯ ಅಂತಿಮ ತೀರ್ಪು ನೀಡಿದ ನ್ಯಾ. ಎಲ್‌. ನಾಗೇಶ್ವರ ರಾವ್‌ ಅವರುಳ್ಳ ನ್ಯಾಯಪೀಠ, “”ಇಂಥ ಜಾತಿ ಆಧಾರಿತ ಅಪರಾಧಗಳನ್ನು ಹತ್ತಿಕ್ಕುವಲ್ಲಿ ಸರ್ಕಾರಗಳು ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಈಗಾಗಲೇ ಸಾಕಷ್ಟು ಬಾರಿ ಸರ್ಕಾರಗಳಿಗೆ ಸೂಚನೆ ನೀಡಿದ್ದೇವೆ. ಆದರೆ, ಈ ಕುರಿತ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಇನ್ನಾದರೂ ಕಟ್ಟುನಿಟ್ಟಿನ ಕಾನೂನುಗಳು ಜಾರಿಯಾಗಲಿ” ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next