Advertisement

Koppala: ಕಾಂಗ್ರೆಸ್ ಸೇರ್ಪಡೆಗೊಂಡ ಆಪ್ತರು… ಬಿಜೆಪಿಯಲ್ಲೇ ಉಳಿಯುವೆ ಎಂದ ಸಂಗಣ್ಣ ಕರಡಿ

05:35 PM Apr 03, 2024 | Team Udayavani |

ಕೊಪ್ಪಳ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷಾಂತರಗೊಳ್ಳುವ ಬೆದರಿಕೆಗಳನ್ನು ಹಾಕುವ ಯತ್ನ ನಡೆಸಿದರೆ ಇನ್ನೂ ಕೆಲವರು ಪಕ್ಷಾಂತರಗೊಂಡಿದ್ದಾರೆ, ಈ ನಡುವೆ ಬಿಜೆಪಿಯ ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು ಇದರಿಂದ ಬೇಸರಗೊಂಡ ಅವರ ಆಪ್ತರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

Advertisement

ಕರಡಿ ಅವರ ಆಪ್ತರಾದ ಈರಣ್ಣ ಗಾಣಿಗೇರ, ವಿರುಪಾಕ್ಷಯ್ಯ ಗದಗಿನಮಠ, ವಿರುಪಾಕ್ಷಪ್ಪ ಗುಂಗಾಡಿ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ, ಈ ಎಲ್ಲರೂ ಸಂಸದರ ಜೊತೆ ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಅವರ ಜೊತೆಯಲ್ಲಿದ್ದವರು ಅವರು ಜೆಡಿಎಸ್, ಬಿಜೆಪಿ ಸೇರ್ಪಡೆಯಾದಾಗಲೂ ಜೊತೆಗಿದ್ದರು, ಆದರೆ ಈ ಬಾರಿ ಸಂಗಣ್ಣ ಕರಡಿ ಅವರಿಗೆ ಬಿಜೆಪಿಯಿಂದ ಟಿಕೆಟ್ ತಪ್ಪಿದ್ದು ಇದರಿಂದ ಬೇಸರಗೊಂಡ ಆಪ್ತರು ಬಿಜೆಪಿ ವಿರುದ್ಧ ಗುಡುಗಿದ್ದರು ಅಲ್ಲದೆ ಇದೀಗ ಕಾಂಗ್ರೆಸ್ ಜೊತೆ ಸೇರ್ಪಡೆಗೊಂಡಿದ್ದಾರೆ. ಇಷ್ಟೆಲ್ಲಾ ನಡೆದರೂ ಸಂಗಣ್ಣ ಕರಡಿ ಮಾತ್ರ ನಾನು ಬಿಜೆಪಿಯಲ್ಲೇ ಇರುತ್ತೇನೆ ಇಲ್ಲಿನ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ಹೊಸ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ನಾಯಕರ ಮೇಲೆ FIR ದಾಖಲು

Advertisement

Udayavani is now on Telegram. Click here to join our channel and stay updated with the latest news.

Next