Advertisement

ಗ್ರಾಮೀಣ ಪ್ರದೇಶ ಅಭಿವೃದ್ದಿಗೆ ಸಂಗಮೇಶ ಸಂಕಲ್ಪ 

05:15 PM May 05, 2018 | Team Udayavani |

ಜಮಖಂಡಿ: ಮಹಾತ್ಮಾ ಗಾಂಧೀಜಿಯವರ ಕನಸು ನನಸಾಗಿಸಲು ಜಮಖಂಡಿ ವಿಧಾನಸಭಾ ಮತಕ್ಷೇತ್ರ ಪಕ್ಷೇತರ ಅಭ್ಯರ್ಥಿ ಸಂಗಮೇಶ ನಿರಾಣಿ ಗ್ರಾಮೀಣ ಅಭಿವೃದ್ಧಿ ಪ್ರಮುಖ ಸಂಕಲ್ಪದೊಂದಿಗೆ ಚುನಾವಣಾ ಕಣದಲ್ಲಿ ಅಭ್ಯರ್ಥಿ ಆಗಿ ಸ್ಪ ರ್ಧಿಸಿದ್ದಾರೆ ಎಂದು ಸಾಹಿತಿ ಸಿದ್ದು ದಿವಾನ ಹೇಳಿದರು.

Advertisement

ತಾಲೂಕಿನ ತೊದಲಬಾಗಿ ಜಿಪಂ ವ್ಯಾಪ್ತಿಯಲ್ಲಿ ಬರತಕ್ಕ ಚಿಕ್ಕಪಡಸಲಗಿ, ಕವಟಗಿ, ಜನವಾಡ, ಬಿದರಿ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸಂಗಮೇಶ ನಿರಾಣಿ ಪ್ರಚಾರ ಹಾಗೂ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.

ಮತಕ್ಷೇತ್ರದ ಕೇವಲ ನಗರಕ್ಕೆ ಮಾತ್ರ ಸಿಮೀತವಾಗಬಾರದು. ನಗರದ ಜೀವನಾಡಿಯಾದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗಬೇಕು. ಪ್ರಸಕ್ತ ಶಾಸಕರು ಕೇವಲ ಜಮಖಂಡಿ ನಗರದಲ್ಲಿ ದೊಡ್ಡ ದೊಡ್ಡ ಸರಕಾರಿ ಕಟ್ಟಡಗಳನ್ನು ನಿರ್ಮಿಸಿ ಅಭಿವೃದ್ಧಿ ಮಾಡಿದ್ದೇನೆಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮೀಣ ಪ್ರದೇಶಗಳು ಭಾರತೀಯ ಸಂಸ್ಕೃತಿಯ ತೊಟ್ಟಿಲು ಆದರೆ, ನಗರ ಪ್ರದೇಶಗಳ ಅಭಿವೃದ್ಧಿಗೆ ಮೆಟ್ಟಿಲು ಎಂಬುದನ್ನು ಮರೆತಿದ್ದಾರೆ. ಅಂತಹ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಸಾರಿಗೆ, ವಿದ್ಯುತ್‌, ಶುದ್ಧ ಕುಡಿಯುವ ನೀರು ಸಹಿತ ಮೂಲ ಸೌಕರ್ಯ ನೀಡುವಲ್ಲಿ ಪ್ರಸಕ್ತ ಶಾಸಕರು ವಿಫಲರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಸಂಗಮೇಶ ನಿರಾಣಿ ಅವರು ಮತಕ್ಷೇತ್ರದಲ್ಲಿರುವ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿ ಗ್ರಾಮೀಣ ಸಮಸ್ಯೆ ಅಭಿವೃದ್ಧಿ ಪರ ಯೋಜನೆ ರೂಪಿಸಿದ್ದಾರೆ. ಮೇ 12ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಟೋ ರಿಕ್ಷಾ ಗುರುತಿಗೆ ಮತ ನೀಡುವ ಮೂಲಕ ಅಭಿವೃದ್ಧಿ ಕನಸುಗಾರನನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಪಕ್ಷೇತರ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಮಾಜಿ ಶಾಸಕ ಜಯವಂತ ಕಾಳೆ, ಆರ್‌.ಪಿ.ಸೋಮರೆಡ್ಡಿ, ಡಾ. ಉಮೇಶ ಮಹಾಬಳಶೆಟ್ಟಿ, ಎಸ್‌.ಕೆ.ಪಾಟೀಲ, ಸಿದ್ರಾಮ ಸಾಯಗೊಂಡ, ಚಿದಾನಂದ ಸೂರಗೊಂಡ, ಗೋಶೀರ ಕೊಣ್ಣೂರ, ಸದಾಶಿವ ಸಾಮೋಜಿ, ಅಡಿವೆಪ್ಪ ಗವರೋಜಿ, ಕೋಸಪ್ಪ ತೆರೆಮನಿ, ಕಾಶೀನಾಥ ಜನಗೊಂಡ, ಕೋಸಪ್ಪ ತೆರೆಮನಿ, ಈಶ್ವರ ನ್ಯಾಮಗೌಡ, ಚನ್ನಪ್ಪ ಗವರೋಜಿ, ಮಹಾದೇವ ಕಲ್ಯಾಣಿ, ರಮೇಶ ಹಂಚಿನಾಳ, ಮಲ್ಲಪ್ಪ ನ್ಯಾಮಗೌಡ, ಹನಮಂತ ಕೊಣ್ಣೂರ ಸಹಿತ ನೂರಾರು ಕಾರ್ಯಕರ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next