Advertisement
ಕುಂದಾಪುರದಿಂದ ಅಂಚೆ ಕಚೇರಿ ಮಾರ್ಗವಾಗಿ ಆನಗಳ್ಳಿ ಕಡೆಗೆ ತೆರಳ ಬೇಕಾದರೆ ದೊಡ್ಡ ಸಾಹಸವನ್ನೇ ಮಾಡ ಬೇಕಾಗಿದೆ. ಇನ್ನು ಅದೇ ರೀತಿ ಆನಗಳ್ಳಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸ ಬೇಕಾದರೂ, ಇದೇ ರೀತಿಯ ಸವಾಲು ಎದುರಿಸಬೇಕು. ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅಂಚೆ ಕಚೇರಿ ಮಾರ್ಗವಾಗಿ ತೆರಳಲು ಕ್ರಾಸ್ ಆಗಬೇಕಾದರೂ ಇನ್ನಷ್ಟು ಕಷ್ಟ ಪಡಬೇಕಾಗಿದೆ.
ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ನಿರಂತರವಾಗಿದ್ದು, ಇಲ್ಲಿ ಪಾದಚಾರಿ ಗಳಂತೂ ರಸ್ತೆ ದಾಟುವುದೇ ದುಸ್ತರವಾಗಿದೆ. ಯಾವ ಕಡೆಯಿಂದ ವಾಹನಗಳು ಬರುತ್ತದೋ ಎಂದು ಹೇಳುವುದು ಕಷ್ಟ. ಅದರಲ್ಲೂ ಹಿರಿಯರಂತೂ ಒಂದು ಬದಿ ಯಿಂದ ಮತ್ತೂಂದು ಕಡೆಗೆ ರಸ್ತೆ ದಾಟಲು ಸಾಧ್ಯವೇ ಇಲ್ಲದಂತಾಗಿದೆ. ಇನ್ನು ಆನಗಳ್ಳಿ ಕಡೆಗೆ ತೆರಳುವ ರಸ್ತೆಯಾಗಿ ಡಾ| ಬಿ.ಬಿ. ಹೆಗ್ಡೆ ಕಾಲೇಜು, ಹಿ.ಪ್ರಾ. ಶಾಲೆಯಿದ್ದು, ವಿದ್ಯಾರ್ಥಿಗಳಿಗೂ ತೊಂದರೆ ಯಾಗುತ್ತಿದೆ. ಅಪಘಾತ ವಲಯ..!
ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದಿರು ವುದರಿಂದ ಇದೊಂದು ಅಪಘಾತ ವಲಯವಾಗಿ ಮಾರ್ಪಡಾಗಿದೆ. ರಾತ್ರಿ ವೇಳೆಯಂತೂ ಇಲ್ಲಿ ಸಂಚರಿಸುವುದೇ ಅಸಾಧ್ಯ ಎನ್ನುವಂತಾಗಿದೆ.
Related Articles
ಇದು ಹೆದ್ದಾರಿಯಾಗಿದ್ದು, ಪ್ರತಿ ದಿನ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಆಗಾಗ ಟ್ರಾಫಿಕ್ ಜಾಂ ಉಂಟಾಗುತ್ತಿರುತ್ತದೆ. ಅದರಲ್ಲೂ ಬೆಳಗ್ಗಿನ ಅವಧಿ ಹಾಗೂ ಸಂಜೆ ವೇಳೆ ಯಾವಾಗಲೂ ಇಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ.
ಇಲ್ಲಿ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸಂಚಾರವನ್ನು ಆರಂಭಿಸದೇ ಇರುವುದರಿಂದ ಈ ಗೊಂದಲಮಯ ಸ್ಥಿತಿ ನಿರ್ಮಾಣವಾಗಿದ್ದು, ಅದಲ್ಲದೆ ಡಿವೈಡರ್ ಮಧ್ಯೆ ಹೆಚ್ಚಿನ ಅಂತರ ಕೂಡ ಇಲ್ಲದಿರುವುದರಿಂದ ಈ ಸಮಸ್ಯೆ ಉಂಟಾಗಿದ್ದು, ಇಲ್ಲಿ ವಾಹನಗಳ ವೇಗ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಹಾಕಿದರೆ ಉತ್ತಮ ಎನ್ನುವ ಬೇಡಿಕೆ ಸಾರ್ವಜನಿಕರಿಂದ ಕೇಳಿ ಬಂದಿದೆ.
Advertisement
ಬ್ಯಾರಿಕೇಡ್ ಅಳವಡಿಕೆಗೆ ಕ್ರಮಸಂಗಮ್ ಜಂಕ್ಷನ್‌ನಲ್ಲಿರುವ ಸಂಚಾರಿ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ಕೂಡಲೇ ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು. ವಾಹನಗಳ ವೇಗ ನಿಯಂತ್ರಿಸಲು ಸದ್ಯದಲ್ಲಿಯೇ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಕುರಿತಂತೆ ಚಿಂತಿಸಲಾಗಿದೆ.
-ಬಿ.ಪಿ. ದಿನೇಶ್ ಕುಮಾರ್, ಕುಂದಾಪುರ ಡಿವೈಎಸ್‌ಪಿ