Advertisement

14ರಿಂದ ವಿರಕ್ತಮಠದಲ್ಲಿ ಪಟ್ಟಾಧಿಕಾರ ಮಹೋತ್ಸವ

04:17 PM May 07, 2019 | Naveen |

ಸಂಡೂರು: ತಾಲೂಕಿನ ಯಶವಂತನಗರ ಗ್ರಾಮದ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠಕ್ಕೆ ಪ್ರಥಮ ಬಾರಿಗೆ ನೂತನ ಕರ್ತೃ ಗದ್ದುಗೆ ಮತ್ತು ಪಟ್ಟಾಧಿಕಾರ ಮಹೋತ್ಸವವನ್ನು ಮೇ 14 ಮತ್ತು 15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಹಾಗೂ ಮಠದ ಮುಖಂಡರಾದ ಚಿತ್ರಿಕಿ ಸತೀಶ್‌ ತಿಳಿಸಿದರು.

Advertisement

ಯಶವಂತನಗರ ಗ್ರಾಮದ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಇಡೀ ಗ್ರಾಮದ ಎಲ್ಲಾ ಜನಾಂಗದ ಮುಖಂಡರು ಹಮ್ಮಿಕೊಂಡಿದ್ದ ಪಟ್ಟಾಧಿಕಾರ ಮಹೋತ್ಸವ ಹಾಗೂ ಕರ್ತೃ ಗದ್ದುಗೆ ಉದ್ಘಾಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಠವು ಯಡೆಯೂರು ಸಿದ್ದಲಿಂಗೇಶ್ವರ ಮಠದ ಪರಂಪರೆಯನ್ನು ಯಾವ ರೀತಿ ಯಡೆಯೂರು ಸಿದ್ದಲಿಂಗೇಶ್ವರರು ತಪ್ಪಸ್ಸನ್ನು ಆಚರಿಸಿ ತಮ್ಮ ಪವಾಡವನ್ನು ಜಗತ್ತಿಗೆ ತೋರಿಸುವ ಮೂಲಕ ಸಮಾಜ ಅಭಿವೃದ್ಧಿ ಮಾಡಿದರೋ ಅದೇ ಮಾರ್ಗದಲ್ಲಿ ಸಿದ್ದರಾಮೇಶ್ವರು ಸ್ವಾಮಿ ಮಲೈ ಪ್ರದೇಶದ ಸಿಗೇ ಪೇಳೆಯಲ್ಲಿ ತಪ್ಪಸ್ಸನ್ನು ಆಚರಿಸಿ, ಹಸುವಿನಿಂದ ಹಾಲನ್ನು ಪಡೆದು ಈ ಜಗತ್ತಿಗೆ ಗೊತ್ತಾಗಿ ಅವರ ಪವಾಡಗಳ ಮೂಲಕ ಭಕ್ತರನ್ನು ಸೆಳೆದು ಒಂದು ಸುಂದರ ಹಾಗೂ ದೈವಿ ಭಕ್ತವಾದ ಮಠ ನಿರ್ಮಾಣಕ್ಕೆ ನಾಂದಿ ಹಾಡಿದ್ದರು. ಇದಕ್ಕೆ 300 ವರ್ಷಗಳ ಇತಿಹಾಸವಿದೆ. ಮಠಕ್ಕೆ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗೇಶ್ವರ ಶಿಷ್ಯರಾಗಿ ಪಳಗಿದ ಮತ್ತು ದೈವಿ ಸ್ವರೂಪರಾದ ಗಂಗಾಧರ ದೇವರನ್ನು ಮೇ 15 ರಂದು ಪಟ್ಟಾಧಿಕಾರ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಮೇ 8 ರಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಥಮವಾಗಿ ಕಲ್ಯಾಣ ದರ್ಶನ ಪ್ರವಚನ ಪ್ರಾರಂಭವಾಗುತ್ತದೆ. ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಇಳಕಲ್ ಚಿತ್ತರಿಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮಿಗಳು ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವರು. ಮುರುಘಾ ಮಠ ಧಾರವಾಡದ ಮಲ್ಲಿಕಾರ್ಜುನ ಸ್ವಾಮಿಗಳು ಸಮಾರಂಭ ಉದ್ಘಾಟನೆ ಮಾಡುವರು. ಮುದಗಲ್ ಮಹಾಂತ ಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನು ಹೇಳುವರು. 14 ರಂದು 1 ಕೋಟಿ 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶಿಲಾಮಂಟಪವನ್ನು ಲೋಕಾರ್ಪಣೆ ಮಾಡಲಾಗುವುದು. ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸುವರು. ಬೆಕ್ಕಿನ ಕಲ್ಮಠ ಶಿವಮೊಗ್ಗದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಅಧ್ಯಕ್ಷತೆ ವಹಿಸುವರು. ಸಂಜೆ ಪ್ರವಚನ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.

15 ರಂದು ಚಿನ್ಮಯಾನುಗ್ರಹ ದೀಕ್ಷೆ ಹಾಗೂ ಷಟ್ಸ್ಥಲ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ಕ್ರಿಯಾಮೂರ್ತಿಗಳಾದ ಶಿವಾನಂದ ಸ್ವಾಮಿಗಳು, ಬೆಳಗಾವಿ, ಸದಾಶಿವ ಸ್ವಾಮಿಗಳು ಹುಕ್ಕೇರಿಮಠ ಹಾವೇರಿ, ಶಾಂತಲಿಂಗ ಸ್ವಾಮಿಗಳು ಭೈರನಟ್ಟಿ ದೊರೆಸ್ವಾಮಿ ವಿರಕ್ತಮಠ, ಗುರು ಬಸವ ಸ್ವಾಮಿಗಳು ಪಾಂಡೋಮಟ್ಟಿ, ಅಲ್ಲಮ ಪ್ರಭು ಸ್ವಾಮಿಗಳು ಚಿಂಚಣಿ ನೆರವೇರಿಸುವರು. 10 ಗಂಟೆಗೆ ಶೂನ್ಯ ಸಿಂಹಾಸನಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ಸಮಾಜ ಸಂಪದ ಕಾರ್ಯಕ್ರಮ ನಡೆಯಲಿದೆ. ಇದರ ಸಾನ್ನಿಧ್ಯವನ್ನು ಡಾ.ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ, ಡಾ. ನಿರ್ಮಲಾನಂದನಾಥ ಸ್ವಾಮಿಗಳು ಆದಿಚುಂಚನಗಿರಿ ವಹಿಸುವರು. ಪ್ರಸನ್ನಾನಂದಪುರಿ ಸ್ವಾಮಿಗಳು ರಾಜೇನಹಳ್ಳಿ, ವಚನಾನಂದ ಸ್ವಾಮಿಗಳು,‌ ಬಸವ ಮಡಿವಾಳ ಮಾಚಿದೇವ ಸ್ವಾಮಿಗಳು, ಸಿದ್ದರಾಮೇಶ್ವರ ಸ್ವಾಮಿಗಳು, ಶಾಂತಲಿಂಗೇಶ್ವರ ಸ್ವಾಮಿಗಳು ನಗರಗಡ್ಡೆ ಇತರರು ವಹಿಸುವರು. ಮುಖಂಡರಾದ ಚಿತ್ರಿಕಿ ಮೃತ್ಯುಂಜಯಪ್ಪ, ಸಮಾಜ ಬಾಂಧವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next