Advertisement

ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ

05:09 PM Dec 22, 2019 | Naveen |

ಸಂಡೂರು: 3 ತಿಂಗಳಿಗೊಮ್ಮೆ ಸಭೆ ಕರೆದರೂ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲವೇಕೆ ಎಂದು ಸದಸ್ಯರು ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.

Advertisement

ತಾ.ಪಂ. ದಿ.|| ಎಂ.ವೈ. ಘೋರ್ಪಡೆ ಸಭಾಂಗಣದಲ್ಲಿ ನಡೆದ 14ನೇ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಅ ಧಿಕಾರಿಗಳು ನಿಮ್ಮ ಮಾತಿಗೆ ಬೆಲೆ ಕೊಡಲಿಲ್ಲವೆಂದರೆ ನೀವು ಸಭೆ ಏಕೆ ಮಾಡಬೇಕು? ಅನಧಿಕೃತ ಅಧಿಕಾರಿಗಳನ್ನು ಹೊರಗೆ ಹಾಕಿ ಎಂದು ಬಿಜೆಪಿಯ ರಾಮಾಂಜಿನೇಯ, ಗಂಗಮ್ಮ, ಪರಿಮಳ, ತಾಳೂರಿನ ಮೇಘನಾಥ, ಹೊಸಗೇರೆಪ್ಪ ವಿಠಲಾಪುರ, ಅಂತಾಪುರದ ಶಂಕ್ರಪ್ಪ, ಪ್ರಕಾಶ ಬೊಮ್ಮಘಟ್ಟ, ವಿಶಾಲಕ್ಷಮ್ಮ ಲಿಂಗಾನಹಳ್ಳಿ, ಗಂಗಮ್ಮ ಭುಜಂಗನಗರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷೆ ಫರ್ಜಾನಾ ಗೌಸ್‌ ಅಜಂ ಡಿ. ಅವರು ಅಧಿ ಕಾರಿಗಳು ಹೊರಹೋಗಲು ಮನವಿ ಮಾಡಿದಾಗ ಪ್ರಭಾರಿ ತಹಶೀಲ್ದಾರ್‌ ಕೆ.ಎಂ. ಶಿವಕುಮಾರ್‌ ಅವರನ್ನೊಳಗೊಂಡು ಎಲ್ಲರೂ ಹೊರನಡೆದರು. ಇದರಿಂದ ಇಡೀ ಸಭೆ ಖಾಲಿಯಾಯಿತು. ಇದನ್ನು ಕಂಡ ಅಧ್ಯಕ್ಷರು ತಕ್ಷಣ ಸಭೆ ಮುಂದೂಡಿ ಮುಂದಿನ ವಾರದಲ್ಲಿ ಸಭೆ ಕರೆಯಲಾಗುವುದು. ಅಂದು ಗೈರಾದರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next