ಸಂಡೂರು: ನರೇಗಾ ಯೋಜನೆಯಡಿಯಲ್ಲಿ ಅತಿ ಹೆಚ್ಚು ಉದ್ಯೋಗ ನೀಡಲು ಅವಕಾಶವಿದ್ದು ರೈತರಿಗೆ ಉಪಯೋಗವಾಗುವ ಬದು ನಿರ್ಮಾಣ, ನೀರು ಇಂಗುವ ಗುಂಡಿ, ಅಂತರ್ ಜಲ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುವ ಮೂಲಕ ಯೋಜನೆಯ ಪೂರ್ಣ ಅನುಷ್ಠಾನವಾಗಬೇಕು ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ನಿತೀಶ್. ಕೆ. ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿ, ಪ್ರಮುಖವಾಗಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಮತ್ತು ಪ್ರಸ್ತುತ ಕೈಗೊಂಡಿರುವ ಕಾಮಗಾರಿಗಳು ಹಾಗೂ ಪ್ರತಿ ಪಂಚಾಯಿತಿಯಲ್ಲಿ ಹಾಗೂ ವಿವಿಧ ಇಲಾಖೆಯಲ್ಲಿ ಯಾವ ಪ್ರಮಾಣದಲ್ಲಿ ಮಾನವ
ದಿನಗಳ ಸೃಜನವಾಗಿದೆ ಎಂಬ ಮಾಹಿತಿಯನ್ನು ನೀಡಬೇಕು. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು ಈಗಿನಿಂದಲೇ ಅದರ ತಯಾರಿಯನ್ನು ಮಾಡದೇ ಇದ್ದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ.
ಪ್ರಮುಖವಾಗಿ ಯಾವ ಗ್ರಾಮಗಳಲ್ಲಿ ಹೆಚ್ಚಿನ ಸಮಸ್ಯೆ ಇದೆಯೋ ಅಲ್ಲಿ ಪ್ರಥಮವಾಗಿ ಸರ್ಕಾರಿ ಬೋರುಗಳಲ್ಲಿ ಅಂತರ ಜಲ ಹೆಚ್ಚಿಸುವಂಥ ಕ್ರಮ, ಖಾಸಗಿ ಬೋರುಗಳಿಂದ ನೀರನ್ನು ಪಡೆಯಲು ಗುರುತಿಸಬೇಕು, ಅವರು ಒಪ್ಪದೇ ಇದ್ದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಕಾನೂನು ರೀತಿ ಮಾಹಿತಿ ನೀಡಿ ಅವರಿಂದ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡುವುದು, ಅಲ್ಲಿಯೂ ನೀರು ಸಿಗದೇ ಇದ್ದಲ್ಲಿ ತಕ್ಷಣ ಟ್ಯಾಂಕರ್ ಮೂಲಕ ನೀರನ್ನು ಪೂರೈಸುವುದು, ಅದಕ್ಕೂ ಅವಕಾಶ ಇಲ್ಲದೆ ಹೋದಲ್ಲಿ ನೂತನ ಬೋರುಗಳನ್ನು ಹಾಕಿಸಬೇಕು. ಅದಕ್ಕೆ 14ನೇ ಹಣಕಾಸು ಅಡಿಯಲ್ಲಿ 2 ಲಕ್ಷ ರೂ. ಹಣ ಮೀಸಲಿಡಲಾಗಿದೆ, ಅದರನ್ನು ಕುಡಿಯುವ ನೀರಿನ ವ್ಯವಸ್ಥೆಗೆ ಬಳಸಲು ಸೂಚಿಸಿದರು.
ಎಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲವೋ ಅಲ್ಲಿ ಪಂಚಾಯಿತಿಯವರೇ ಮಾಡಿದರೆ ಪ್ರತಿ ಘಟಕಕ್ಕೆ 3 ಸಾವಿರ ರೂಪಾಯಿಗಳು ವ್ಯಯಮಾಡಬಹುದು. ಇಲ್ಲವಾದಲ್ಲಿ ತಾಲೂಕು ಮಟ್ಟದಲ್ಲಿ ಈಗಾಗಲೇ ಟೆಂಡರ್ ಕರೆದಿರುವಂತಹ ಗುತ್ತಿಗೆದಾರರಿಗೆ ವಹಿಸಿ ಸರಿಪಡಿಸಲು ಕ್ರಮವಹಿಸಬೇಕು. ಸ್ವಚ್ಛ ಭಾರತಮಿಷನ್ ಅಡಿಯಲ್ಲಿ ಕೈಗೊಂಡಿರುವ ಕ್ರಮಗಳ ಪಟ್ಟಿಯನ್ನು ಕೇಳಿದರು. ಕೆಲವು ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲದೇ ಇರುವುದು, ಶಾಲೆಗಳಲ್ಲಿ, ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ ಯಾವ ಕ್ರಮ ವಹಿಸಲಾಗಿದೆ. ಅವು ಪೂರ್ಣವಾಗದಿದ್ದಲ್ಲಿ ಮತ್ತು ಕೆಲವು ತಡೆಹಿಡಿಯಲಾಗಿದ್ದರೆ ಅವುಗಳನ್ನು ಮರು ಚಾಲನೆಗೆ ಅವಕಾಶವನ್ನು ನೀಡಲಾಗಿದ್ದು ಮಾರ್ಚ್ 10ರೊಳಗೆ ಮಾಹಿತಿ ನೀಡಿ ಶೌಚಾಲಯ ನಿರ್ಮಿಸಬೇಕು.
ಕಾಮಗಾರಿಗಳು ಅದಲು ಬದಲು (ಚೇಂಜ್ ಅಫ್ ವರ್ಕ) ಬಗ್ಗೆ ತಕ್ಷಣ ಕ್ರಮಕೈಗೊಂಡು ಕಾಮಗಾರಿಗಳು ತುರ್ತಾಗಿ ಕೈಗೊಳ್ಳಬೇಕು. ಬಹಳಷ್ಟು ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಮತ್ತು ಬಳಕೆ ಬಗ್ಗೆ ಪಂಚಾಯಿತಿ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಕಾಮಗಾರಿ ಕೈಗೊಳ್ಳಬೇಕು. ಆಯುಷ್ಮಾನ್ ಭಾರತ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಎಲ್ಲ ಗ್ರಾಮಪಂಚಾಯಿತಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸುವ ಮೂಲಕ ಹೆಚ್ಚು ಹೆಚ್ಚು ನಾಗರಿಕರಿಗೆ ಸಿಗುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛ ಭಾರತ್ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಬೇಕು. ಇಲ್ಲವಾದಲ್ಲಿ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಪ್ರಕಾಶ್, ಜಿಲ್ಲಾಪಂಚಾಯಿತಿ ಇಂಜಿನಿಯರಿಂಗ್ ಉಪವಿಭಾಗಾಧಿಕಾರಿ ಹನುಮಂತರಡ್ಡಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿ ಕಾರಿಗಳು, ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿ
ಕಾರಿಗಳು ಉಪಸ್ಥಿತರಿದ್ದರು.