Advertisement
ಅವರು ಗುರುವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿಯವರ 123ನೇ ಜನ್ಮದಿನದ ಅಂಗವಾಗಿ ಧರ್ಮನಿರಪೇಕ್ಷತೆ- ಪ್ರಜಾಪ್ರಭುತ್ವವನ್ನು ತಿಳಿಸಿ ಎಂಬ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ದೇಶ ಬೋಸರ ಧರ್ಮ ನಿರಪೇಕ್ಷತೆಯ ಜಾತ್ಯತೀತ ರಾಷ್ಟ್ರವಾಗಿ ಜೈಹಿಂದ್ ಘೋಷಣೆಯನ್ನು ಹೊಂದುವ ಮೂಲಕ ಕಟ್ಟಲಾಗಿದೆ. ನಾಡಿನ ಯುವ ಶಕ್ತಿಯೇ ಅಗಿದ್ದ ಸ್ವಾಮಿ ವಿವೇಕಾನಂದರ ಸ್ಫೂರ್ತಿಯನ್ನು ಪಡೆದು ಚಳವಳಿಯನ್ನು ಪ್ರಾರಂಭಿಸಿದ ಕಾಲದಲ್ಲಿ ಬ್ರಿಟಿಷರಿಂದ ಧರ್ಮ, ಜಾತಿ, ಭಾಷೆ ಮತ್ತು ಪ್ರಾದೇಶಿಕತೆಯ ಆಧಾರದಲ್ಲಿ ವಿಭಜನೆ, ಕೋಮು ಕಲಹಗಳು ಹಾಗೂ ಜಾತಿ ತುಳಿತ ಇವೆಲ್ಲವೂಗಳಿಂದ ಸ್ವಾತಂತ್ರ್ಯವನ್ನು ಪಡೆಯುವ ಹೋರಾಟವನ್ನು ಮಾಡಿದವರು ಸುಭಾಷ್‌ಚಂದ್ರಬೋಸರು. ಆದರೆ ಇಂದು ನಾವು ಹಿಂದೂ, ಮುಸ್ಲಿಂರ ನಡುವಿನ ವ್ಯತ್ಯಾಸ ನಿರ್ಮಾಣ ಮಾಡುವ ಮೂಲಕ ಆಳ್ವಿಕೆ ನಡೆಸುವವರು ಸಹ ಬ್ರಿಟಿಷ್ ಮಾದರಿಯಲ್ಲಿ ದೇಶವನ್ನು ಒಡೆಯುವ, ಅಳುವ ತಂತ್ರಗಾರಿಕೆಯನ್ನು ಮಾಡುತ್ತಿರುವುದು ದೇಶಕ್ಕೆ ಮಾಡುತ್ತಿರುವ ಅಪಮಾನವಾಗುತ್ತಿದೆ, ಆದ್ದರಿಂದ ಈ ದೇಶದ ಸೇನಾನಿಯವರನ್ನು ಸ್ಮರಿಸುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಧರ್ಮ ನಿರಪೇಕ್ಷತೆಯ ರಾಷ್ಟ್ರ ನಿರ್ಮಾಣ ಮಾಡೋಣ ಎಂದರು.
Advertisement
ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿ
03:32 PM Jan 24, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.