Advertisement

ಬಿಜೆಪಿ ಕಾರ್ಯತಂತ್ರ ಇಲ್ಲಿ ನಡೆಯಲ್ಲ

11:43 AM Jun 01, 2019 | Team Udayavani |

ಸಂಡೂರು: ಪುರಸಭೆ ಚುನಾವಣೆಯನ್ನು ಸರಳವಾಗಿ ಗೆಲ್ಲಬೇಕಾಗಿತ್ತು. ಆದರೆ ನಮ್ಮವರೇ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರೇ ಖುದ್ದು ಬಿಜೆಪಿ ಪರ ಪ್ರಚಾರ ಮಾಡಿದ ಪರಿಣಾಮ ಪ್ರಯಾಸದಿಂದ ಕಾಂಗ್ರೆಸ್‌ ಪುರಸಭೆಯ ಗದ್ದುಗೆ ಹಿಡಿಯಬೇಕಾಯಿತು. ಇಲ್ಲಿ ಮೋದಿ ಅಲೆ ನಡೆಯದು ಎಂದು ಮಾಜಿ ಶಾಸಕ ಅನಿಲ್ ಲಾಡ್‌ ತಿಳಿಸಿದರು.

Advertisement

ಪುರಸಭೆಯಲ್ಲಿ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ಮೆರವಣಿಗೆ ವೇಳೆ ಮಾತನಾಡಿದ ಅವರು, ಜನತೆ ಸಚಿವ ತುಕಾರಾಂ ಅವರ ಶ್ರಮ, ಸಂತೋಷ್‌ ಲಾಡ್‌ ಅವರ ಕಾರ್ಯ, ಕಾಂಗ್ರೆಸ್‌ ಪಕ್ಷದ ಅಭಿವೃದ್ಧಿ ಪರಿಗಣಿಸಿ ಎಷ್ಟೇ ಒತ್ತಡವಿದ್ದರೂ ಸಹ ಮತ ಹಾಕುವ ಮೂಲಕ ನಮ್ಮನ್ನು ಗೆಲ್ಲಿಸಿದ್ದಾರೆ. ಸಂಡೂರು ಕಾಂಗ್ರೆಸ್‌ ಭದ್ರಕೋಟೆಯಾಗಿದೆ. ಇಡೀ ಜಿಲ್ಲೆಯಲ್ಲಿ ಜನಾರ್ದನರಡ್ಡಿ ಸಮಯದಲ್ಲಿ ಸಂಡೂರಿನಲ್ಲಿ ಕಾಂಗ್ರೆಸ್‌ ಗೆದ್ದಿದೆ. ಇಲ್ಲಿ 16-18 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ಆದರೆ ನಮ್ಮವರೇ ಕೆಲವರು ಉಂಟು ಮಾಡಿದ ಗೊಂದಲ, ಅಲ್ಲದೆ ಪಕ್ಷ ಬಿಟ್ಟು ಮನೆತನಗಳು ಚುನಾವಣೆಯಲ್ಲಿ ಭಾಗವಹಿಸಿದ ಪರಿಣಾಮ ಬೀರಿದೆ. 15 ವರ್ಷ ಕಾಂಗ್ರೆಸ್‌ ಅಡಳಿತ ನಡೆಸಿದೆ. ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರು ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಈ ಬಗ್ಗೆ ಖುದ್ದಾಗಿ ದಿನೇಶ್‌ ಗುಂಡೂರಾವ್‌ ಅವರಿಗೆ ದೂರು ನೀಡಿದ್ದೇವೆ ಎಂದರು.

ಹಗರಿಬೊಮ್ಮನಹಳ್ಳಿಯಿಂದಲೂ ಸಹ ಭೀಮಾನಾಯ್ಕ ದೂರು ನೀಡಿದ್ದಾರೆ. ಕ್ರಮ ಏಕೆ ಇಲ್ಲ ಎಂದಾಗ ಚುನಾವಣೆ ಹತ್ತಿರ ಇದ್ದ ಕಾರಣ ಕ್ರಮವಾಗಿಲ್ಲ, ಈಗ ಮಾತ್ರ ಆ ರೀತಿಯಾಗದು ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಮಾತನಾಡಿ, ಜನತೆಯ ಅಶೀರ್ವಾದ, ಯಾರೇ ಎಷ್ಟೇ ವಿರೋಧಿಸಿದರೂ ಸಹ ಜನತೆ ಕೈ ಹಿಡಿದಿದ್ದಾರೆ. ನಾವು ಜನರ ಕೈ ಬಿಡುವುದಿಲ್ಲ, ಅವರ ಕೆಲಸಗಳನ್ನು ಮಾಡಿಕೊಡುತ್ತೇವೆ. ಸಂಡೂರಿನ ಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಅಕ್ಷಯ ಲಾಡ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next