ಸಂಡೂರು: ಧೂಳು ಮುಕ್ತ ಮತ್ತು ರಸ್ತೆಗಳ ಒತ್ತಡ ನಿಯಂತ್ರಣಕ್ಕಾಗಿ ತಾಲೂಕಿನ ಎಲ್ಲ ಗಣಿ ಕಂಪನಿಗಳು ಕನ್ವೇಯರ್ ಬೆಲ್r ಅಳವಡಿಕೆಗೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಕೆಎಂಇಆರ್‌ಸಿಎಲ್ (ಎಂ.ಡಿ.)ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಅಧಿಕಾರಗಳ ತಂಡ ತಾಲೂಕಿನ ವೆಸ್ಕೋ, ಎಂಎಂಎಲ್, ಬಿಕೆಜಿ ಇತರ ಗಣಿ ಕಂಪನಿಗಳ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿತು.
2006ರಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಇಡೀ ತಾಲೂಕು ಮಾಲಿನ್ಯವಾಗಿ ಸಾರ್ವಜನಿಕರು ಬದುಕಲಾರದಂಥ ದುಸ್ಥಿತಿ ಮತ್ತು ರಸ್ತೆಗಳೇ ಕಳೆದುಹೋದಂಥ ಸ್ಥಿತಿಯನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭೇಟಿ ನೀಡಿ ವರದಿ ನೀಡಿದ ಮೇಲೆ ಕೋರ್ಟ್ ಮಧ್ಯ ಪ್ರವೇಶ ಮಾಡಿ ವಿಶೇಷವಾಗಿ ಪರಿಸರದ ಪುನುರುಜ್ಜೀವನ ಮತ್ತು ಪುನರುತ್ಪತ್ತಿಗಾಗಿ ಕೆಎಂಇಆರ್‌ಸಿಎಲ್ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಅಡಿಯಲ್ಲಿ ಕಾರ್ಯನಿರ್ವಹಿಸಲು ವಿಶೇಷ ಮಾರ್ಗಸೂಚಿಗಳನ್ನು ನೀಡಿತ್ತು.
ಆ ನಿಟ್ಟಿನಲ್ಲಿ 2 ವರ್ಷಗಳಿಂದ ಜಿಂದಾಲ್ ಕಂಪನಿಯು ನಂದಿಹಳ್ಳಿ ರೈಲ್ವೆ ಸೈಡಿಂಗ್‌ನಿಂದ ಜಿಂದಾಲ್ ಫ್ಯಾಕ್ಟರಿಯವರೆಗೆ ಕನ್ವೇಯರ್ ಬೆಲ್r ಹಾಕುತ್ತಿದೆ. ಉಳಿದಂತೆ ಬಹಳಷ್ಟು ಕಂಪನಿಗಳು ಕೋರ್ಟ್ ಆದೇಶ ಪಾಲಿಸಿಲ್ಲ. ಹಾಗಾಗಿ ಕೆಎಂಇಆರ್‌ಸಿಎಲ್ (ಎಂ.ಡಿ) ಮ್ಯಾನೇಜಿಂಗ್ ಡೈರೆಕ್ಟರ್ ಪಿ.ಸಿ. ರೈ, ಮೈಸೂರು ಮಿನಿರಲ್ಸ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟ್ರ್ ನವೀನ್ ರಾಜ್, ಮುಖ್ಯ ಜನರಲ್ ಮ್ಯಾನೇಜರ್ ಶಂಕರಲಿಂಗಯ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಮಹಾವೀರ್, ಜಿಲ್ಲಾಧಿಕಾರಿ ನಕುಲ್, ತಹಶೀಲ್ದಾರ್ ಸಿದ್ದೇಶ್, ವಲಯ ಅರಣ್ಯಾಧಿಕಾರಿ ದಾದಾಖಲಂದರ್, ಶಶಿಧರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ನಂತರ ಅಧಿಕಾರಿಗಳು ಎಂಎಂಎಲ್ ಗಣಿ ಕಂಪನಿ, ಬಿಕೆಜಿ, ವೆಸ್ಕೋ, ಜಿಂದಾಲ್ ಇತರ ಗಣಿ ಕಂಪನಿಗಳು ಅದಿರನ್ನು ರೈಲ್ವೆ ಸೈಡಿಂಗ್ಸ್‌ಗೆ ಕನ್ವೇಯರ್ ಬೆಲ್r ಮೂಲಕ ಸಾಗಿಸಿ ನಂತರ ಅದನ್ನು ರೈಲ್ವೆ ಯಾರ್ಡ್‌ನಿಂದ ನಿರ್ದಿಷ್ಟ ಕಂಪನಿಗಳಿಗೆ ಕಳುಹಿಸಬೇಕು ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಸ್ಥಳ ನಿಗದಿಪಡಿಸಿದರು. ಪ್ರಮುಖವಾಗಿ ಧರ್ಮಾಪುರ ಭಾಗದಲ್ಲಿ ರೈಲ್ವೆ ಯಾರ್ಡ್/ಸೈಡಿಂಗ್, ಸುಶೀಲಾನಗರದ ಹತ್ತಿರ ರೈಲ್ವೆ ಯಾರ್ಡ್/ಸೈಡಿಂಗ್, ನಂದಿಹಳ್ಳಿ ಹತ್ತಿರ ರೈಲ್ವೆ ಯಾರ್ಡ್/ಸೈಡಿಂಗ್ ನಿರ್ಮಾಣ ಮಾಡಬೇಕು, ಅಲ್ಲದೆ ಅಲ್ಲಿಯವರೆಗೆ ವಿವಿಧ ಗಣಿ ಕಂಪನಿಗಳು ಕನ್ವೇಯರ್ ಬೆಲ್r ಹಾಕಲು ಅರಣ್ಯ ಪ್ರದೇಶ, ಗಣಿ ಪ್ರದೇಶಗಳ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಸ್ಥಳ ನಿಗದಿಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಗಣಿ ಕಂಪನಿಗಳಾದ ಎಂ.ಎಂ.ಎಲ್, ಜೆಎಸ್‌ಡಬ್ಲೂ, ವೆಸ್ಕೋ, ಎಸ್‌ಕೆಎಂಇ., ಬಿಕೆಜಿ, ವಿಎನ್‌ಕೆ ಇತರ ಕಂಪನಿಗಳ ಅಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು. ಅಲ್ಲದೇ ನೀಲನಕ್ಷೆಯನ್ನೂ ಪರಿಶೀಲನೆ ಮಾಡಿದರು.