Advertisement

ಸಂಧ್ಯಾ ದೇವನಾಥನ್‌ ಮೆಟಾದ ಭಾರತೀಯ ವಿಪಿ

06:37 PM Nov 17, 2022 | Team Udayavani |

ನವದೆಹಲಿ:  ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ಗಳ ಮಾತೃಸಂಸ್ಥೆ ಮೆಟಾ, ಭಾರತದಲ್ಲಿನ ಉಪಾಧ್ಯಕ್ಷ ಹುದ್ದೆಗೆ ಸಂಧ್ಯಾ ದೇವನಾಥನ್‌ ಅವರನ್ನು ನೇಮಕ ಮಾಡಿದೆ.

Advertisement

2023ರ ಜ.1ರಿಂದ ಅನ್ವಯವಾಗುವಂತೆ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಸಂಧ್ಯಾ ದೇವನಾಥನ್‌ ಅವರು ಏಷ್ಯಾ-ಪೆಸಿಫಿಕ್‌ ವಲಯದ ಮುಖ್ಯಸ್ಥರಾಗಿರುವ ಡ್ಯಾನ್‌ ನೇರಿ ಅವರಿಗೆ ನೇರ ವರದಿ ಮಾಡಿಕೊಳ್ಳಲಿದ್ದಾರೆ. ಭಾರತದಲ್ಲಿ ಮೆಟಾದ ವಹಿವಾಟು ಮತ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಕೈಗೊಂಡು ಅನುಷ್ಠಾನಗೊಳಿಸಲಿದ್ದಾರೆ.

2016ರಲ್ಲಿ ಅವರು ಮೆಟಾಗೆ ಸೇರಿದ್ದರು. ಸಂಧ್ಯಾ ದೇವನಾಥನ್‌ ಅವರಿಗೆ ಒಟ್ಟು 22 ವರ್ಷಗಳ ಸೇವಾನುಭವ ಇದೆ. ದೆಹಲಿ ವಿವಿಯಿಂದ ಎಂಬಿಎ ಪದವೀಧರರಾಗಿರುವ ಅವರು ಬ್ಯಾಂಕಿಂಗ್‌, ಪಾವತಿ ಕ್ಷೇತ್ರದ ತಂತ್ರಜ್ಞಾನದಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next