Advertisement

META; ಚೆನ್ನೈಯಲ್ಲಿ ಶುರುವಾಗಲಿದೆ “ಮೆಟಾ’ದ ದೇಶದ ಮೊದಲ ಡೇಟಾ ಸೆಂಟರ್‌

11:41 PM Apr 02, 2024 | Team Udayavani |

ಹೊಸದಿಲ್ಲಿ: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌ನ ಮಾತೃಸಂಸ್ಥೆ, “ಮೆಟಾ’ ಚೆನ್ನೈಯಲ್ಲಿ ದೇಶದ ಮೊದಲ ಡೇಟಾ ಸೆಂಟರ್‌ ಸ್ಥಾಪಿಸಲಿದೆ.

Advertisement

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ‌ ಕ್ಯಾಂಪಸ್‌ನ 10 ಎಕ್ರೆ ಪ್ರದೇಶದಲ್ಲಿ ಅದು ಆರಂಭಗೊಳ್ಳಲಿದೆ. ಇದರಿಂದಾಗಿ “ಮೆಟಾ’ಗೆ ಭಾರತಕ್ಕೆ ಸಂಬಂಧಿಸಿದ ಕಂಟೆಂಟ್‌ಗಳು ಮತ್ತು ಇತರ ವಿಚಾರಗಳ ಬಗ್ಗೆ ಕ್ಷಿಪ್ರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಜತೆಗೆ ಸ್ಥಳೀಯ ಭಾಷೆಗಳಲ್ಲಿ ನೀಡಲಾಗುವ ಜಾಹೀರಾತು ಗಳಿಗೂ ಅನುಕೂಲವಾಗಲಿದೆ. ಭಾರತಕ್ಕೆ ಸಂಬಂಧಿ ಸಿದ ಕಂಟೆಂಟ್‌ಗಳನ್ನು ಸದ್ಯ ಸಿಂಗಾಪುರದಿಂದ ಪರಿಷ್ಕರಿಸಿ ಅಪ್‌ಡೇಟ್‌ ಮಾಡಲಾಗುತ್ತದೆ

ಈ ಬಗ್ಗೆ ಕಳೆದ ತಿಂಗಳು ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next