Advertisement

“ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬೇಕು’

01:03 AM Apr 18, 2019 | Sriram |

ಮಹಾನಗರ: ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಭಾಗ್ಯ ವಂತರು. ಇವರಿಗೆ ಕೆಲಸದ ಜತೆಗೆ ತಮ್ಮ ಪದವಿಯನ್ನು ಪಡೆಯಲು ಅವಕಾ ಶವನ್ನು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ನೀಡಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿ ಕಾರಿ ಡಾ| ದಯಾನಂದ ನಾಯ್ಕ ಹೇಳಿದರು.

Advertisement

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಥಮ ಬ್ಯಾಚ್‌ನ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತ ನಾಡಿದ ಅವರು, ದುಡಿ ಯುವ ಮಕ್ಕಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸುವ ಉದ್ದೇಶದೊಂದಿಗೆ, ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಮೂರು ವರ್ಷಗಳ ಹಿಂದೆ ಸಂಧ್ಯಾ ಕಾಲೇಜನ್ನು ಪ್ರಾರಂಭಿಸಿತ್ತು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ಅದನ್ನು ಸದುಪಯೋಗ ಪಡಿಸಬೇಕು. ಪದವಿಯ ಬಳಿಕ ಹಲವಾರು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಈಗಿನಿಂದಲೇ ಸಿದ್ಧವಾಗಿರಬೇಕು ಎಂದು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಧಿಕಾರಿ ಡಾ| ಎ. ಸಿದ್ಧಿಕ್‌ ಮಾತನಾಡಿ, ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಗೂ ಭಾವನೆಗಳಿವೆ. ಇತರ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದಾಗ ಇವರಿಗೆ ಜವಾಬ್ದಾರಿ ಹೆಚ್ಚು. ಸಂಧ್ಯಾ ಕಾಲೇಜಿನ ಅಳಿವು ಉಳಿವಿನ ಜವಾಬ್ದಾರಿ ಇವರ ಮೇಲಿದೆ. ಆದ್ದರಿಂದ ಈ ವಿದ್ಯಾರ್ಥಿಗಳು ಕಾಲೇಜಿನ ರಾಯಭಾರಿಗಳು ಎಂದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ಸಂಧ್ಯಾ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಳೆದ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕಿದರು ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳು ತಮ್ಮ ಹಿರಿಯ ವಿದ್ಯಾರ್ಥಿ ಗಳೊಡನೆ ಕಳೆದ ಸಿಹಿ ನೆನಪುಗಳನ್ನು ಈ ಸಮಾರಂಭದಲ್ಲಿ ಹಂಚಿಕೊಂಡು ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿಗೆ ವಿದಾಯ ಕೋರುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜಿಗೆ ತಾವು ಪ್ರವೇಶ ಪಡೆದುಕೊಂಡ ವರ್ಷ ವೇ ಕಾಲೇಜು ಕೂಡ ಆಗ ತಾನೆ ಆರಂಭಗೊಂಡ ಕಾರಣ ಕಾಲೇಜಿನ ಗ್ರಂಥಾಲಯದಲ್ಲಿ ಸಾಕಷ್ಟು ಪ್ರಮಾಣದ ಪುಸ್ತಕಗಳ ಕೊರತೆ ಎದುರಿಸಿದ್ದು, ತಮ್ಮ ಕಿರಿಯ ಸ್ನೇಹಿತರು ಈ ರೀತಿಯ ಸಮಸ್ಯೆಗಳನ್ನು ಎದುರಿಸಬಾರದು ಎಂದು ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗಾಗಿ ಧನಸಹಾಯವನ್ನು ನೀಡಿದರು.

Advertisement

ಕಾಲೇಜಿನ ಅಂತಿಮ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು ಹಾಗೂ ಹಲವಾರು ಸ್ಪರ್ಧೆಗಳನ್ನು ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದರು.ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬಂದಿಯವರು ಹಾಜರಿದ್ದರು.

ಉನ್ನತ ಶಿಕ್ಷಣಕ್ಕೆ ಅವಕಾಶ
ಕಾಲೇಜಿನ ಪ್ರಾಂಶುಪಾಲ ಡಾ| ರಾಮಕೃಷ್ಣ ಬಿ.ಎಂ. ಮಾತನಾಡಿ, ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಮುಂದುವರಿಸುವ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಸಂಧ್ಯಾ ಕಾಲೇಜನ್ನು ಪ್ರಾರಂಭಿಸಲಾಗಿದೆ. ಪದವಿ ಮುಗಿಸಿದ ಬಳಿಕ ಸ್ನಾತಕೋತ್ತರ ಪದವಿಯನ್ನು ಈ ಸಂಧ್ಯಾ ಕಾಲೇಜಿನಲ್ಲೇ ಮುಂದುವರಿಸಲು ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next