Advertisement

ಐಪಿಎಲ್‌ಗೆ ಮೊದಲ ನೇಪಾಳ ಕ್ರಿಕೆಟಿಗ ಪ್ರವೇಶ

06:45 AM Jan 29, 2018 | Team Udayavani |

ಕಠ್ಮಂಡು (ನೇಪಾಳ): ಐಪಿಎಲ್‌ ಅದೆಷ್ಟೋ ಕ್ರಿಕೆಟಿಗರಿಗೆ ಜೀವನ ನೀಡಿದೆ. ಕೋಟ್ಯಾಧಿಶರನ್ನಾಗಿ ಮಾಡಿದೆ. ಸುಖದ ಬದುಕನ್ನೇ ಕಟ್ಟಿಕೊಟ್ಟಿದೆ. ಇದೀಗ ನೇಪಾಳ ಲೆಗ್‌ಸ್ಪಿನ್ನರ್‌ವೊಬ್ಬರು ಮೊದಲ ಬಾರಿಗೆ ಟಿ20 ಕೂಟದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಇವರು ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡಕ್ಕೆ 20 ಲಕ್ಷ ರೂ.ಗೆ ಬಿಕರಿಯಾಗಿದ್ದಾರೆ. ಪೂರ್ಣ ಹೆಸರು ಸಂದೀಪ್‌ ಲಮಿಚಾನೆ. 

Advertisement

2016ರಲ್ಲಿ ನಡೆದ 19 ವರ್ಷ ವಯೋಮಿತಿಯೊಳಗಿನ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ದೇಶ ಪ್ರತಿನಿಧಿಸಿದ್ದರು. ಐರೆಲಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ 1 ಹ್ಯಾಟ್ರಿಕ್‌ ಸೇರಿದಂತೆ 5 ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ಇವರು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 9 ಪಂದ್ಯವನ್ನಾಡಿದ್ದಾರೆ. ಒಟ್ಟಾರೆ 12 ವಿಕೆಟ್‌ ಪಡೆದಿದ್ದಾರೆ. 48ಕ್ಕೆ 3 ವಿಕೆಟ್‌ ಇವರ ಶ್ರೇಷ್ಠ ಸಾಧನೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್‌ ಕ್ಲಾರ್ಕ್‌ ಅಕಾಡೆಮಿಯಿಂದ ಅವರು ತರಬೇತಿ ಪಡೆದುಕೊಂಡಿದ್ದಾರೆ. ಇದೀಗ ಅವರು ಖ್ಯಾತ ಕ್ರಿಕೆಟಿಗರಾದ ಗೌತಮ್‌ ಗಂಭೀರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಟ್ರಂಟ್‌ ಬೌಲ್ಟ್ ಜತೆಗೆ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಳ್ಳಲಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next