ಹೊಸಕೋಟೆ: ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶದ ವನ ವಿಜ್ಞಾನ ಕೇಂದ್ರ ಸುಮಾರು 25 ಎಕರೆ ಜಾಗದಲ್ಲಿದ್ದುಇಲ್ಲಿನ ಶ್ರೀಗಂಧದ ನೂರಾರು ಮರಗಳಿಗೆ ರಾತ್ರೋರಾತ್ರಿ ಕೊಡಲಿ ಪೆಟ್ಟು ಬಿದ್ದಿದೆ.
ವನ ವಿಜ್ಞಾನ ಕೇಂದ್ರದ ಅರಣ್ಯ ಪ್ರದೇಶ ವಿಶಾಲವಾಗಿದ್ದು, ಸಂಶೋಧನೆಗಾಗಿ ಸಾವಿರಾರು ಶ್ರೀಗಂಧ ಮರಗಳನ್ನು ಬೆಳೆಸಲಾಗಿದೆ. ಇಲ್ಲಿನ 25 ಎಕರೆ ಅರಣ್ಯ ಪ್ರದೇಶವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ಬರುವ ವನ ವಿಜ್ಞಾನ ಕೇಂದ್ರದ ಸಂಶೋಧನೆಗೆ ನೀಡಲಾಗಿದೆ. ಜತೆಗೆಇಲ್ಲಿನ ಪ್ರದೇಶದಲ್ಲಿ ಶ್ರೀಗಂಧ ಹಾಗೂ ಬಿದಿರು ಮರ ಸಂಶೋಧನೆಗೆ ಬೆಳೆಸಲಾಗಿದೆ. 10 ವರ್ಷದಿಂದಸಂಶೋಧನೆಗಾಗಿ ಸಾವಿರಾರು ಶ್ರೀಗಂಧ ಮರಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ.
500ಕ್ಕೂ ಹೆಚ್ಚು ಮರಕ್ಕೆ ಕೊಡಲಿಪೆಟ್ಟು: ಸುಮಾರು 500ಕ್ಕೂ ಅಧಿಕ ಶ್ರೀಗಂಧ ಮರಗಳನ್ನು ಕಡಿದುಕಳ್ಳತನ ಮಾಡಲಾಗಿದೆ. ಕೋಟ್ಯಂತರ ಮೌಲ್ಯದ ಶ್ರೀಗಂಧ ಮರಗಳು ಎಲ್ಲಿ ಸಾಗಿಸಿದ್ದಾರೆ ಎನ್ನುವುದು ನಿಗೂಢವಾಗಿದೆ. ವನ ವಿಜ್ಞಾನ ಕೆಂದ್ರದಲ್ಲಿ ಅಧಿಕಾರಿಗಳು, ಗಾರ್ಡ್‌ಗಳಿದ್ದರೂ ಮರ ಕಡಿದು ಸಾಗಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳ ಮೇಲೆ ಅನುಮಾನ: ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು, ಗಾರ್ಡ್ ಸೇರಿ ಎಲ್ಲಾ ವ್ಯವಸ್ಥೆಯಿದ್ದರೂಕಳ್ಳರು ಮರ ಕಡಿದಿದ್ದಾರೆ. ಕೆಲವು ಮರಗಳನ್ನು ಕಡಿದುಸಾಗಿಸಿದ್ದು ಕೆಲವನ್ನು ಅರ್ಧ ಕಡಿದು ಅಲ್ಲಿಯೇಬಿಟ್ಟಿದ್ದಾರೆ.ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಮೇಲೆಅನುಮಾನ ವ್ಯಕ್ತವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.
ಠಾಣೆಯಲ್ಲಿ ದೂರು ದಾಖಲು: ಇನ್ನು ಒಂದು ಕೆ.ಜಿ.ಶ್ರೀಗಂಧ 15 ಸಾವಿರ ಬೆಲೆ ಬಾಳುತ್ತೆ. ಹೀಗಿದ್ದು, ನೂರಾರು ಮರ ಕಡಿದು ಸಾಗಾಣಿಕೆ ಮಾಡುವವರೆಗೂ ಸಿಬ್ಬಂದಿ ಕಣ್ಮುಚ್ಚಿ ಕುಳಿತರಾ ಎನ್ನುವ ಅನುಮಾನ ಮೂಡಿದೆ. ಈ ಸಂಬಂಧಎಚ್ಚೆತ್ತಿರೋ ಅಧಿಕಾರಿ ನಾಗರಾಜ್‌ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಧಿಕ ಬೆಲೆ ಬಾಳುವ ಶ್ರೀಗಂಧ ಮರಗಳಿಗೆ ವನ ವಿಜ್ಞಾನ ಕೇಂದ್ರದಲ್ಲಿ ರಕ್ಷಣೆ ಇಲ್ಲದಾಗಿದೆ. ಅಧಿಕಾರಿಗಳು ಗಾರ್ಡ್ ಗಳಿದ್ದರೂ ನೂರಾರು ಶ್ರೀಗಂಧ ಮರಗಳು ಕಳ್ಳರ ಪಾಲಾಗಿದೆ. ಪೊಲೀಸರು ತನಿಖೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಿ, ಇನ್ನುಳಿದ ಶ್ರೀಗಂಧ ಮರ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ.
– ನಾಗರಾಜ್, ವನ ವಿಜ್ಞಾನ ಕೇಂದ್ರದ ಅಧಿಕಾರಿ