Advertisement

Belthangadi: ಶ್ರೀಗಂಧ ಕಳವು ಪ್ರಕರಣ: 27 ವರ್ಷಗಳಿಂದ ತಲೆಮರೆಸಿದ್ದ ಆರೋಪಿ ಸೆರೆ

07:35 PM Aug 24, 2023 | Team Udayavani |

ಬೆಳ್ತಂಗಡಿ: ಶ್ರೀಗಂಧ ಕಳವು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡು 27 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

Advertisement

ನೆರೆಯ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕುಂಡಾಪು ಮನೆಯ ಎಸ್‌.ಎ.ಅಶ್ರಫ್‌ ಬಂಧಿತ ಆರೋಪಿ. ಈತ 27 ವರ್ಷಗಳಿಂದ ಮುಂಬಯಿ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಬಂಟ್ವಾಳ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಠಾಣಾ ಪ್ರಭಾರ ನಿರೀಕ್ಷಕರಾದ ನಾಗೇಶ್‌ ಕದ್ರಿ ಹಾಗೂ ಉಪನಿರೀಕ್ಷಕರರಾದ ಧನರಾಜ್‌ ಟಿ.ಎಂ. ಹಾಗೂ ಚಂದ್ರಶೇಖರ್‌ ನೇತೃತ್ವದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ಗ‌ಳಾದ ಬೆನ್ನಿಚ್ಚನ್‌, ಗಂಗಾಧರ್‌ ಹಾಗೂ ಆಶೋಕ್‌ ಅವರು ಕೇರಳ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ವಿರುದ್ಧ ಕಾಸರಗೋಡು ಪೊಲೀಸ್‌ ಠಾಣೆಯಲ್ಲಿ ಕಲಂ: 125/2004 ಕಲಂ: 279,304 (ಎ)ರಂತೆ ಹಾಗೂ ಉಪ್ಪಿನಂಗಡಿ ಮತ್ತು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಫಾರೆಸ್ಟ್‌ ಕಾಯ್ದೆಯಡಿ ದಾಖಲಾಗಿರುವ ಎಲ್‌ಪಿಸಿ ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next